ಕಲಬುರಗಿ:ಜಾರ್ಖಂಡ್ನಲ್ಲಿ ಈಚೆಗೆ ಬೈಕ್ ಕಳ್ಳತನ ಎಸಗಿರುವುದಾಗಿ ಆರೋಪಿಸಿ ತಬ್ರೇಜ್ ಅನ್ಸಾರಿ ಎಂಬ ಮುಸ್ಲಿಂ ಯುವಕನನ್ನು ಗುಂಪೊಂದು ಹತ್ಯೆಗೈದಿತ್ತು.
ಈ ಘಟನೆಯನ್ನು ಖಂಡಿಸಿ ಕಲಬುರಗಿ ನಾಗರಿಕರ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಮುಸ್ಲಿಂ ಯುವಕನ ಹತ್ಯೆ ಖಂಡಿಸಿ ಪ್ರತಿಭಟನೆ.. ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹ - undefined
ಜಾರ್ಖಂಡ್ನಲ್ಲಿ ಈಚೆಗೆ ಮುಸ್ಲಿಂ ಯುವಕನ ಮೇಲೆ ಸುಳ್ಳು ಕಳ್ಳತನ ಆರೋಪ ಮಾಡಿ ಹತ್ಯೆ ಮಾಡಲಾಗಿದೆ ಎಂದು ಕಲಬುರಗಿ ನಾಗರಿಕ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸುವಂತೆ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಮುಸ್ಲಿಂ ಯುವಕನನ್ನು ಹತ್ಯೆಗೈದ ಘಟನೆ ಖಂಡಿಸಿ ಪ್ರತಿಭಟನೆ
ತಬ್ರೇಜ್ ಅನ್ಸಾರಿ ಹತ್ಯೆಗೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.ಬೈಕ್ ಕಳ್ಳತನದ ಸುಳ್ಳು ಆರೋಪ ಮಾಡಿ, ಗುಂಪು ಕಟ್ಟಿಕೊಂಡು ಆತನನ್ನು ಮನ ಬಂದಂತೆ ತಳಿಸಿದಲ್ಲದೆ ಜೈ ಶ್ರೀರಾಮ, ಜೈ ಹನುಮಾನ ಎಂದು ಹೇಳುವಂತೆ ಒತ್ತಾಯಿಸಿದ್ದಾರೆ. ಜೈ ಶ್ರೀರಾಮ ಎಂದು ಹೇಳಿದರೂ ಆತನ ಮೇಲೆ ಅಮಾನವೀಯವಾಗಿ ವರ್ತಿಸಿ ಹತ್ಯೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.