ಕರ್ನಾಟಕ

karnataka

ETV Bharat / state

ನವಿಲು, ಜಿಂಕೆ ಬೇಟೆಯಾಡಿ ಮಾಂಸ ಮಾರಾಟ: ಮೂವರ ಬಂಧನ, ಮಾಂಸ ಜಪ್ತಿ - ಮಾಂಸ ಜಪ್ತಿ

ನವಿಲು ಹಾಗೂ ಜಿಂಕೆಗಳನ್ನು ಬೇಟೆಯಾಡಿ ಅದರ ಮಾಂಸವನ್ನು ಮಾರುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Kalburgi
ನವಿಲು, ಜಿಂಕೆ ಬೇಟೆಯಾಡಿ ಮಾಂಸ ಮಾರಾಟ: ಮೂವರ ಬಂಧನ

By

Published : Nov 30, 2022, 11:24 AM IST

ಕಲಬುರಗಿ:ರಾಷ್ಟ್ರಪಕ್ಷಿ ನವಿಲು ಹಾಗೂ ಜಿಂಕೆಗಳನ್ನು ಬೇಟೆಯಾಡಿ ಮಾಂಸ ಮಾರಾಟ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಪೊಲೀಸ್​​ ಹಾಗೂ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಕಲಬುರಗಿ ನಗರದ ಯದೂಲ್ಲಾ ಕಾಲೋನಿಯ ಸೈಯದ್ ನಜ್ಮುದ್ದೀನ್, ಮೊಹಮ್ಮದ್ ಅಲ್ತಾಫ್ ಹಾಗೂ ಸಮೀ ಜುನೈದಿ ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಆಧರಿಸಿ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಮನೆಯೊಂದರ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಿಂದ 1 ರೈಫಲ್, 2 ಏರ್ ಗನ್, 22 ಜೀವಂತ ಗುಂಡುಗಳು, 114 ಖಾಲಿ ಕಾಡತೂಸಗಳು, ಜಿಂಕೆಯ ಮಾಂಸದ ತುಂಡುಗಳು, ಜಿಂಕೆಯ 20 ಕಾಲುಗಳು, ಒಂದು ನವಿಲು, ಬುಲೆರೋ ವಾಹನ, ಮೊಬೈಲ್, 17 ಸಾವಿರ ನಗದು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಪ್ತಿ ಮಾಡಲಾದ ಬಂದೂಕುಗಳು

ಜಿಂಕೆ ಹಾಗೂ ನವಿಲುಗಳನ್ನು ಬೇಟೆಯಾಡಿ ಯದುಲ್ಲಾ ಕಾಲೋನಿಯ ನಜ್ಮೋದ್ದೀನ್ ಮನೆಯಲ್ಲಿ ಕತ್ತರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ: ಕೇರಳದ ಆರೋಪಿಗಳು ವಶಕ್ಕೆ

ABOUT THE AUTHOR

...view details