ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಸತ್ತು ಬದುಕಿ, ಮತ್ತೆ ಶಾಶ್ವತವಾಗಿ ಕಣ್ಮುಚ್ಚಿದ ವೃದ್ಧ! - ವೃದ್ಧನ ಆಶ್ಛರ್ಯ ಸಾವು ಕಲಬುರಗಿ

ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲ್ಲೂಕಿನ ಹಿರೇಜೇವರ್ಗಿ ಗ್ರಾಮದ ನಿವಾಸಿ ಚಂದಪ್ಪ ಅತನೂರು ಎನ್ನುವ ವೃದ್ಧ ಸತ್ತು ಬದುಕಿ ಅಚ್ಚರಿಸಿ ಮೂಡಿಸಿ ಮತ್ತೆ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ. ಕುತೂಹಲಕಾರಿ ಸ್ಟೋರಿ ಇಲ್ಲಿದೆ ನೋಡಿ.

kalburagi
ಸಾವನ್ನಪ್ಪಿದ ವೃದ್ಧ

By

Published : Dec 24, 2019, 1:52 PM IST

ಕಲಬುರಗಿ: ಜಿಲ್ಲೆಯ ಅಫ್ಜಲಪುರ ತಾಲ್ಲೂಕಿನ ಹಿರೇಜೇವರ್ಗಿ ಗ್ರಾಮದ ನಿವಾಸಿ ಚಂದಪ್ಪ ಅತನೂರು ಎನ್ನುವ ವೃದ್ಧ ಸತ್ತು ಬದುಕಿ ಅಚ್ಚರಿಸಿ ಮೂಡಿಸಿ ಮತ್ತೆ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ.

ಚಂದಪ್ಪ ಅತನೂರು (95) ನಗರದ ಡಬರಾಬಾದ್ ಕಾಲೋನಿಯ ತನ್ನ ಪುತ್ರನ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ತಿಂಗಳು ನವೆಂಬರ್ 24 ರಂದು ವೃದ್ಧ ಚಂದಪ್ಪ ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆ ಮಾಡಲು ಮೃತದೇಹವನ್ನು ಆಂಬ್ಯುಲೆನ್ಸ್‌ ಮೂಲಕ ಸ್ವಗ್ರಾಮಕ್ಕೆ ಸ್ಥಳಾಂತರಿಸಲಾಗಿತ್ತು. ಮನೆ ಮುಂದೆ ಮೃತದೇಹವಿಟ್ಟು ಸಂಬಂಧಿಕರ ಆಗಮನಕ್ಕಾಗಿ ಕಾಯುವಾಗ ಐದಾರು ಗಂಟೆಗಳ ನಂತ್ರ ಸತ್ತಿದ್ದ ಚಂದಪ್ಪಜ್ಜ ದಿಢೀರ್ ಉಸಿರಾಡಲು ಪ್ರಾರಂಭಿಸಿದ್ದಾರೆ! ನಂತರ ಬರೋಬ್ಬರಿ 27 ದಿನಗಳ ಕಾಲ ಬದುಕಿದ ಈ ವ್ಯಕ್ತಿ ಡಿಸೆಂಬರ್ 22 ರಂದು ಮನೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ.

ಇನ್ನು ಕಾರ್ಯಕ್ರಮ ನಡೆಯುವುದಕ್ಕೂ ಮುನ್ನ (ಡಿ. 22 ರಂದು) ಮಧ್ಯಾಹ್ನ 2 ಗಂಟೆಯೊಳಗೆ ಕಾರ್ಯಕ್ರಮಗಳನ್ನು ಮುಗಿಸಿ, ನಾ ಹೋಗಬೇಕಾಗಿದೆ ಎಂದು ಕುಟುಂಬಸ್ಥರ ಬಳಿ ಹೇಳಿದ್ದರಂತೆ. ಅದರಂತೆ ಡಿ. 22 ರಂದು ಮಧ್ಯಾಹ್ನ 2 ಗಂಟೆಯೊಳಗೆ ಚಂದಪ್ಪಜ್ಜ ಸಾವನ್ನಪ್ಪಿದ್ದಾರೆ.

ABOUT THE AUTHOR

...view details