ಕಲಬುರಗಿ: ಕೊಟ್ಟ ಸಾಲ ವಾಪಸ್ ಕೇಳಿದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಇಲ್ಲಿನ ಕಾಕಡೆ ಚೌಕ್ ಬಳಿಯ ಲಂಗರ್ ಆಂಜನೇಯ ದೇವಸ್ಥಾನ ಬಳಿ ನಡೆದಿದೆ.
ರವಿಕುಮಾರ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.ತಲೆಗೆ ಗಂಭೀರ ಗಾಯಗೊಂಡ ರವಿಕುಮಾರನನ್ನು ಸರ್ಕಾರಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈತನ ಸ್ನೇಹಿತ ಗಣಪತಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಸಾಲ ವಾಪಸ್ ಕೇಳಿದಕ್ಕೆ ಸ್ನೇಹಿತನಿಂದಲೇ ಮಾರಣಾಂತಿಕ ಹಲ್ಲೆ ಘಟನೆ ವಿವರ:
ಗಣಪತಿ ಹಾಗೂ ಹಲ್ಲೆಗೆ ಒಳಗಾದ ರವಿಕುಮಾರ ಇಬ್ಬರು ಸ್ನೇಹಿತರು. ಕಳೆದ ನಾಲ್ಕು ವರ್ಷಗಳ ಹಿಂದೆ ರವಿಕುಮಾರ್ ಬಳಿ ಗಣಪತಿ 2 ಲಕ್ಷ ರೂಪಾಯಿ ಸಾಲ ಪಡೆದಿದ್ದನಂತೆ. ಎಷ್ಟೇ ಬಾರಿ ಹಣ ವಾಪಸ್ ಹಣ ಕೇಳಿದ್ರು ಕೊಡದೆ ಗಣಪತಿ ಸತಾಯಿಸುತ್ತಿದ್ದನಂತೆ. ಇದರ ನಡುವೆಯೇ ರವಿಕುಮಾರ್ ಮತ್ತು ಈತನ ಹೆಂಡತಿ ಮಾಲಾಶ್ರೀ, ಗಣಪತಿ ಮನೆಗೆ ತೆರಳಿ ಹಣ ಕೇಳಿದ್ದಾರೆ. ಇದರಿಂದ ಕೋಪಗೊಂಡ ಗಣಪತಿ ಕುಟುಂಬ ಕಲ್ಲು, ಕಬ್ಬಿಣ ರಾಡ್ನಿಂದ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ. ಈ ಸಂಬಂಧ ಗಣಪತಿ ವಿರುದ್ದ ರವಿಕುಮಾರ್ ಆರೋಪ ಮಾಡಿದ್ದಾರೆ. ಸದ್ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.