ಕಲಬುರಗಿ:ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲದ ಕಾರಣ ನಾಳಿನ ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಹಿಂತೆಗೆದುಕೊಳ್ಳಲು ವಿನಂತಿ ಮಾಡಿದ್ದೇನೆ ಎಂದು ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಇಂದು ಬೆಳಿಗ್ಗೆ ಏಳು ಗಂಟೆಗೆ ನೌಕರರ ಸಂಘದ ಮುಖಂಡರ ಜೊತೆ ಸಭೆ ಕರೆದಿದ್ದೆ. ಆಂತರಿಕವಾಗಿ ಸಭೆ ಮಾಡಿ ನಂತರ ಹೇಳುತ್ತೇವೆ ಎಂದು ಅವರು ಸಭೆಗೆ ಬರಲಿಲ್ಲ. ಈಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ ಇದೆ. ಯಾವುದೇ ಭರವಸೆ ಕೊಡಲು ಈ ಸಂದರ್ಭದಲ್ಲಿ ಆಗುವುದಿಲ್ಲ. ಅಲ್ಲದೇ ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಅನುಮತಿ ಕೇಳಿದ್ದೇವೆ. ಆಯೋಗ ಅನುಮತಿ ನೀಡಿದರೆ ಚುನಾವಣಾ ನೌಕರರ ಸಂಘದ ಮುಖಂಡರ ಜೊತೆ ಚರ್ಚಿಸುವೆ. ಸಾರಿಗೆ ಸಂಸ್ಥೆ ನೌಕರರು ಮುಷ್ಕರ ಕೈ ಬಿಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.