ಕಲಬುರಗಿ: ಶಾಸಕರನ್ನು ಯಾರು ಅನರ್ಹಗೊಳಿಸಿದ್ರೋ ಅವರೇ ಈಗ ಅನರ್ಹರಾಗಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಕಾಂಗ್ರೆಸ್ ನಾಯಕರನ್ನು ಕುಟುಕಿದ್ದಾರೆ.
ಶಾಸಕರನ್ನು ಅನರ್ಹಗೊಳಿಸಿದವರೇ ಈಗ ಅನರ್ಹ: ಡಿಸಿಎಂ ಕಾರಜೋಳ ವ್ಯಂಗ್ಯ - kalaburagi latest news
ಶಾಸಕರನ್ನು ಯಾರು ಅನರ್ಹಗೊಳಿಸಿದ್ರೋ ಅವರೇ ಈಗ ಅನರ್ಹರಾಗಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಕಾಂಗ್ರೆಸ್ ನಾಯಕರನ್ನು ಕುಟುಕಿದ್ದಾರೆ.
ತ್ರೈಮಾಸಿಕ ಕೆಡಿಸಿ ಸಭೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಾರಿಗಳ ಪರಿಶೀಲನೆಗಾಗಿ ಕಲಬುರಗಿಗೆ ಆಗಮಿಸಿ ಮಾತಾಡಿದ ಡಿಸಿಎಂ, ಶಾಸಕರ ರಾಜೀನಾಮೆ ಸರಿಯಾಗಿದೆ ಅಂತಾ ಜನರು ಉಪ ಚುನಾವಣೆಯಲ್ಲಿ ತೀರ್ಪು ಕೊಟ್ಟಿದ್ದಾರೆ. ಬಿಜೆಪಿಗೆ ಜನರು ಬೆಂಬಲ ನೀಡಿದ್ದಾರೆ. ದೇಶದ ಇತಿಹಾಸದಲ್ಲಿಯೇ ಬೈ-ಎಲೆಕ್ಷನ್ನಲ್ಲಿ ಇಷ್ಟು ದೊಡ್ಡ ಲೀಡ್ನಿಂದ ಯಾರೂ ಕೂಡಾ ಗೆದ್ದಿಲ್ಲ ಎಂದರು.
ಸಚಿವ ಸ್ಥಾನ ಹಂಚಿಕೆ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಇನ್ನು ಡಿಸಿಎಂ ಹುದ್ದೆ ರದ್ದಾಗೋದರ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಬಿ.ಎಸ್.ಯಡಿಯೂರಪ್ಪ ಅವರಿಗೆ ಮನ್ನಣೆ ನೀಡಿಯೇ ಮುಖ್ಯಮಂತ್ರಿ ಮಾಡಲಾಗಿದೆ. ಏನೇ ಇದ್ದರೂ ಸಿಎಂ ಬಿಎಸ್ವೈ ಹಾಗೂ ಹೈಕಮಾಂಡ್ ಜೊತೆಗೂಡಿಯೇ ನಿರ್ಣಯ ತೆಗೆದುಕೊಳ್ಳುತ್ತಾರೆ. ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುವದಾಗಿ ತಿಳಿಸಿದರು.