ಕಲಬುರಗಿ:ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಅವರು ಸೇಡಂ ತಾಲೂಕಿನ ಯಾನಾ ಗುಂದಿಗೆ ಭೇಟಿ ನೀಡಿ ಮಾತೆ ಮಾಣಿಕೇಶ್ವರಿ ದರ್ಶನ ಪಡೆದಿದ್ದಾರೆ.
ಮಾತೆ ಮಾಣಿಕೇಶ್ವರಿ ದರ್ಶನ ಪಡೆದ ಡಿಸಿಎಂ ಅಶ್ವತ್ಥ್ ನಾರಾಯಣ.. ಮಠಕ್ಕೆ 5.25 ಲಕ್ಷ ರೂ. ದೇಣಿಗೆ.. - ಮಾತೆ ಮಾಣಿಕೇಶ್ವರಿ ದೇವಸ್ಥಾನ
ಸೋಮವಾರ ಕಲಬುರಗಿ ಜಿಲ್ಲೆ ಪ್ರವಾಸದಲ್ಲಿದ್ದ ಡಿಸಿಎಂ ಯಾನಗುಂದಿಗೆ ಭೇಟಿ ನೀಡಿ ಮಾತೆ ಮಾಣಿಕೇಶ್ವರಿ ದರ್ಶನ ಪಡೆದಿದ್ದಾರೆ. ಇದೇ ವೇಳೆ ವೈಯಕ್ತಿಕವಾಗಿ ಮಾಣಿಕೇಶ್ವರಿ ಮಠಕ್ಕೆ 5.25 ಲಕ್ಷ ರೂಪಾಯಿ ದೇಣಿಗೆಯ ಚೆಕ್ ನೀಡಿದ್ದಾರೆ.
![ಮಾತೆ ಮಾಣಿಕೇಶ್ವರಿ ದರ್ಶನ ಪಡೆದ ಡಿಸಿಎಂ ಅಶ್ವತ್ಥ್ ನಾರಾಯಣ.. ಮಠಕ್ಕೆ 5.25 ಲಕ್ಷ ರೂ. ದೇಣಿಗೆ.. DCM Ashwathanarayana](https://etvbharatimages.akamaized.net/etvbharat/prod-images/768-512-6194941-thumbnail-3x2-chai.jpg)
ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ
ಮಾತೆ ಮಾಣಿಕೇಶ್ವರಿ ದರ್ಶನ ಪಡೆದ ಡಿಸಿಎಂ ಅಶ್ವತ್ಥನಾರಾಯಣ
ಸೋಮವಾರ ಕಲಬುರಗಿ ಜಿಲ್ಲೆಯ ಪ್ರವಾಸದಲ್ಲಿದ್ದ ಡಿಸಿಎಂ ಯಾನ ಗುಂದಿಗೆ ಭೇಟಿ ನೀಡಿದ್ದರು. ಮಾತೆಯ ದರ್ಶನ ಪಡೆದ ನಂತರ ಕೋಟಿಲಿಂಗೇಶ್ವರದ ದರ್ಶನ ಪಡೆದರು. ಈ ವೇಳೆ ವೈಯಕ್ತಿಕವಾಗಿ ಮಾಣಿಕೇಶ್ವರಿ ಮಠಕ್ಕೆ 5.25 ಲಕ್ಷ ರೂ. ದೇಣಿಗೆಯ ಚೆಕ್‌ನ ಶ್ರೀಮಠಕ್ಕೆ ಹಸ್ತಾಂತರಿಸಿದರು. ಸಂಸದ ಡಾ. ಉಮೇಶ್ ಜಾಧವ್, ಸೇಡಂ ಶಾಸಕ ರಾಜಕುಮಾರ್ ಪಾಟೀಲ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಹಾಗೂ ಮತ್ತಿತರರು ಅವರಿಗೆ ಸಾಥ್ ನೀಡಿದರು.