ಕಲಬುರಗಿ :ಸಿಎಂ ಬಿಎಸ್ವೈ ಆದೇಶದ ಮೇರೆಗೆ ಕಲಬುರಗಿ ಲಾಕ್ಡೌನ್ ಆದೇಶವನ್ನು ಜಿಲ್ಲಾಧಿಕಾರಿ ಬಿ.ಶರತ್ ಅವರು ಹಿಂಪಡೆದಿದ್ದಾರೆ.
ಕಲಬುರಗಿ ಲಾಕ್ಡೌನ್ ಆದೇಶ ಹಿಂಪಡೆದ ಜಿಲ್ಲಾಧಿಕಾರಿ - Kalburgi unlock
ಸಿಎಂ ಯಡಿಯೂರಪ್ಪ ರಾಜ್ಯಾದ್ಯಂತ ಅನ್ಲಾಕ್ ಆದೇಶ ಹೊರಡಿಸಿದ್ದು, ಕಲಬುರಗಿ ಜಿಲ್ಲಾಧಿಕಾರಿ ಲಾಕ್ ಡೌನ್ ಆದೇಶ ಹಿಂಪಡೆದಿದ್ದಾರೆ.
Kalburgi DC
ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜುಲೈ.27ರವರೆಗೆ ಲಾಕ್ ಡೌನ್ ವಿಧಿಸಿ ಜಿಲ್ಲಾಧಿಕಾರಿ ಬಿ. ಶರತ್ ಆದೇಶಿಸಿದ್ದರು.
ಇದೀಗ ರಾಜ್ಯಾದ್ಯಂತ ಅನ್ಲಾಕ್ ಆದೇಶ ಹೊರಡಿಸುವಂತೆ ಸಿಎಂ ಬಿ. ಎಸ್. ಯಡಿಯೂರಪ್ಪ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿಧಿಸಲಾಗಿದ್ದ ಲಾಕ್ಡೌನ್ ಹಿಂಪಡೆದು ಮರು ಆದೇಶ ಹೊರಡಿಸಿದ್ದಾರೆ.