ಕಲಬುರಗಿ: ಕೋವಿಡ್ ಲಸಿಕೆ ಡ್ರೈ ರನ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಲಬುರಗಿ ನಗರದ ಅಶೋಕನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿ, ಲಸಿಕೆ ರಿಹರ್ಸಲ್ ನಡೆಸಿರುವ ಕುರಿತು ಪರಿಶೀಲನೆ ನಡೆಸಿದರು.
ಕಲಬುರಗಿ: ಕೋವಿಡ್ ಲಸಿಕಾ ಡ್ರೈ ರನ್ ಕೇಂದ್ರಕ್ಕೆ ಭೇಟಿ ಡಿಸಿ ಭೇಟಿ, ಪರಿಶೀಲನೆ - ಲಸಿಕೆ ಡ್ರೈ ರನ್ ಕೇಂದ್ರ
ಕಲಬುರಗಿ ನಗರದ ಅಶೋಕನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ, ಲಸಿಕೆ ರಿಹರ್ಸಲ್ ನಡೆಸಿರುವ ಕುರಿತು ಪರಿಶೀಲನೆ ನಡೆಸಿದರು.
ಈ ವೇಳೆ ಫಲಾನುಭವಿಗಳಿಗೆ ಗುಲಾಬಿ ಹೂವು ಕೊಟ್ಟು ಸ್ವಾಗತ ಮಾಡುವ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ಸೋಂಕಿತರಿಂದ ನಿರ್ದಿಷ್ಟ ಅಂತರ ಪಾಲಿಸಬೇಕಾಗುತ್ತದೆ, ಹೀಗಿರುವಾಗ ಸೋಂಕಿತರಿಗೆ ಗುಲಾಬಿ ಹೂ ಕೊಟ್ಟು ಸ್ವಾಗತಿಸುವ ಕಾರ್ಯ ಬೇಡ ಎಂದು ಅಧಿಕಾರಿಗಳಿಗೆ ಡಿಸಿ ಸಲಹೆ ನೀಡಿದರು.
ಪರಿಶೀಲನೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡ್ರೈ ರನ್‌ಗೆ ರಾಜ್ಯದ 5 ಜಿಲ್ಲೆಗಳಲ್ಲಿ ಕಲಬುರಗಿ ಜಿಲ್ಲೆ ಆಯ್ಕೆಯಾಗಿದ್ದು, ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಲಸಿಕೆ ಡ್ರೈ ರನ್ ಸರಾಗವಾಗಿ ನಡೆಯುತ್ತಿದೆ. ಸದ್ಯದ ಮಟ್ಟಿಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಸಾಯಂಕಾಲದವರೆಗೆ ಮೂರು ಕೇಂದ್ರದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಆ್ಯಪ್ ಸೇರಿ ತಾಂತ್ರಿಕ ತೊಂದರೆ ಅಥವಾ ಇತರ ಸಮಸ್ಯೆಗಳು ಕಂಡು ಬಂದರೆ ಸರ್ಕಾರಕ್ಕೆ ವರದಿಯಲ್ಲಿ ತಿಳಿಸುವುದಾಗಿ ಹೇಳಿದರು.