ಕಲಬುರಗಿ:ಚಂಡಮಾರುತ ಹಿನ್ನೆಲೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದಲ್ಲದೇ ಮುಂಗಾರು ಹಂಗಾಮು ಪ್ರಾರಂಭವಾಗಿರುವುದರಿಂದ ಕೆಳದಂಡೆ ಮುಲ್ಲಾಮಾರಿ ಮತ್ತು ಅಮರ್ಜಾ ಯೋಜನೆಗಳ ಅಣೆಕಟ್ಟುಗಳಿಗೆ ಹೆಚ್ಚಿನ ನೀರು ಬರುವ ಸಾಧ್ಯತೆ ಇರುತ್ತದೆ. ಪ್ರವಾಹ ನಿಯಂತ್ರಿಸಲು ಹೆಚ್ಚಿನ ಪ್ರಮಾಣದ ನೀರನ್ನು ಯಾವುದೇ ಮುನ್ಸೂಚನೆ ನೀಡದೇ ಯಾವಾಗ ಬೇಕಾದ್ರೂ, ನದಿಗೆ ಬಿಡಬಹುದು ಎಂದು ಕರ್ನಾಟಕ ನೀರಾವರಿ ನಿಗಮದ ಕಲಬುರಗಿ ಐಪಿಸಿ ವಿಭಾಗ 1ರ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಭಾರಿ ಮಳೆ ಸಾಧ್ಯತೆ: ಕಲಬುರಗಿಯಲ್ಲಿ ನದಿಪಾತ್ರದ ಜನರಿಗೆ ಎಚ್ಚರಿಕೆ - Cyclone Background Heavy Rain in akalaburagi
ಚಂಡಮಾರುತದ ಹಿನ್ನೆಲೆಯಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಯಾವುದೇ ಮುನ್ಸೂಚನೆ ನೀಡದೆ ಯಾವಾಗ ಬೇಕಾದ್ರೂ, ನದಿಗೆ ನೀರು ಬಿಡಬಹುದು. ನದಿ ಪಾತ್ರದ ಜನರು ನದಿಗಿಳಿಯಬಾರದು ಎಂದು ಕರ್ನಾಟಕ ನೀರಾವರಿ ನಿಗಮ ಸೂಚನೆ ನೀಡಿದೆ.
ಕಲಬುರಗಿಯಲ್ಲಿ ನದಿ ಪಾತ್ರದ ಜನರಿಗೆ ಎಚ್ಚರಿಕೆ
ಆದ್ದರಿಂದ ಮುನ್ನೆಚ್ಚರಿಕೆಯಾಗಿ ನದಿ ಅಕ್ಕಪಕ್ಕ ಇರುವ ಗ್ರಾಮಗಳ ಜನರು ಬಟ್ಟೆ ಒಗೆಯಲು, ದನಕರುಗಳಿಗೆ ನೀರು ಕುಡಿಸಲು ನದಿಗೆ ಇಳಿಯಬಾರದು. ಜಲಾಶಯಗಳ ನದಿ ಅಕ್ಕಪಕ್ಕದ ರೈತರು, ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿಗಳನ್ನು ಹಾಗೂ ನದಿ ಪಾತ್ರದಲ್ಲಿರುವ ಸಣ್ಣ ನೀರಾವರಿ ಮತ್ತು ಇನ್ನಿತರ ಯಾವುದೇ ಇಲಾಖೆಗಳಿಗೆ ಸಂಬಂಧಪಟ್ಟ ಆಸ್ತಿಗಳಿದ್ದಲ್ಲಿ ಮುಂಜಾಗ್ರತೆಯಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕೆಂದು ತಿಳಿಸಿದ್ದಾರೆ.
ಇದನ್ನೂ ಓದಿ:ತನ್ನ ನಿವೇಶನಕ್ಕೆ ಸೇರಿದ್ದೆಂದು ರಸ್ತೆಗೇ ಬೇಲಿ ಹಾಕುವುದೇ? ಮಾಲೀಕನ ವಿರುದ್ಧ ಜನರ ಆಕ್ರೋಶ