ಕರ್ನಾಟಕ

karnataka

ETV Bharat / state

ಕಲಬುರಗಿ ಕೃಷಿ ವಿದ್ಯಾರ್ಥಿಗಳು ಕಲಿಕೆ ಜೊತೆಗೆ ಕೃಷಿ ಮಾಡಿ ಗಳಿಕೆ

ಟೊಮ್ಯಾಟೊ, ಬದನೆಕಾಯಿ, ಬೆಂಡಿ, ಅವರೆ ಕಾಳು, ಚವಳೆಕಾಯಿ, ಹಾಗಲಕಾಯಿ, ಸೌತೆಕಾಯಿ, ಪಡವಳ ಕಾಯಿ, ಚಂಡು ಹೂವು ಹೀಗೆ ವಿವಿಧ ಬಗೆಯ ತೋಟಗಾರಿಕೆ, ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ..

By

Published : Mar 27, 2021, 9:10 PM IST

Updated : Mar 27, 2021, 11:50 PM IST

ಕೃಷಿ
ಕೃಷಿ

ಕಲಬುರಗಿ :ಕಲಬುರಗಿ ಕೃಷಿ ಮಹಾವಿದ್ಯಾಲಯದ ಬಿಎಸ್​ಇ ಅಂತಿಮ ವರ್ಷದ ವಿದ್ಯಾರ್ಥಿಗಳು ಕಲಿಕೆ ಜೊತೆಗೆ ಕೃಷಿ ಮಾಡಿ ಗಳಿಕೆಯನ್ನು ಪಡಿಯುತ್ತಿದ್ದಾರೆ.

ಮೂರು ವರ್ಷ ಕೃಷಿ ಬಗ್ಗೆ ಕಲಿಯುವ ವಿದ್ಯಾರ್ಥಿಗಳು ಅಂತಿಮ ವರ್ಷದಲ್ಲಿ ಪ್ರಾಕ್ಟಿಕಲ್​ನಲ್ಲಿ ಸ್ವತಃ ತಾವೇ ಕೃಷಿ ಮಾಡಬೇಕು. ಹೀಗಾಗಿ, ಇಲ್ಲಿನ ಬಿಎಸ್​ಇ ಅಂತಿಮ ವರ್ಷದ 67 ವಿದ್ಯಾರ್ಥಿಗಳು ಕಲಿಕೆ ಜೊತೆಗೆ ಗಳಿಕೆ ಮಾಡಿ ಕೈ ತುಂಬ ಹಣ ಎಣಿಸುತ್ತಿದ್ದಾರೆ. ವಿದ್ಯಾರ್ಥಿಗಳ ಕೃಷಿ ಆಸಕ್ತಿಗೆ ವಿವಿಯ ಪ್ರಾಂಶುಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳು ಕಲಿಕೆ ಜೊತೆಗೆ ಕೃಷಿ ಮಾಡಿ ಗಳಿಕೆಯನ್ನು ಪಡಿಯುತ್ತಿದ್ದಾರೆ

ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿನ ಸುಮಾರು ಎರಡು ಎಕರೆ ಪ್ರದೇಶದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಕೃಷಿ ಮಾಡ್ತಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಎರಡು ಸಾಲುಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಟೊಮ್ಯಾಟೊ, ಬದನೆಕಾಯಿ, ಬೆಂಡಿ, ಅವರೆ ಕಾಳು, ಚವಳೆಕಾಯಿ, ಹಾಗಲಕಾಯಿ, ಸೌತೆಕಾಯಿ, ಪಡವಳ ಕಾಯಿ, ಚಂಡು ಹೂವು ಹೀಗೆ ವಿವಿಧ ಬಗೆಯ ತೋಟಗಾರಿಕೆ, ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಭಾಗಶಃ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದು, ಇಳುವರಿ ಕೂಡ ಬಂದಿದೆ. ಬೆಳೆದ ಫಸಲನ್ನು ಖದ್ದು ವಿದ್ಯಾರ್ಥಿಗಳೇ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡ್ತಿದ್ದಾರೆ. ಕಲಿಕೆ ಜೊತೆ ಗಳಿಕೆ ಕಾನ್ಸೆಪ್ಟ್ ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿಯೂ ಸಹಾಯವಾಗುತ್ತಿದೆ. ವಿವಿಯ ಆಡಳಿತ ಸಿಬ್ಬಂದಿ ಕೂಡ ವಿದ್ಯಾರ್ಥಿಗಳಿಂದ ಕೃಷಿ ಉತ್ಪನ್ನ ಖರೀದಿ ಮಾಡಿ ಪ್ರೋತ್ಸಾಹ ಮಾಡ್ತಿದ್ದಾರೆ.

ಇದನ್ನೂ ಓದಿ..ಜಾರಕಿಹೊಳಿ ವಾಗ್ದಾಳಿ ಬೆನ್ನಲ್ಲೇ ಡಿಕೆಶಿ ಪ್ರತಿಕ್ರಿಯೆ: ಕನಕಪುರ ಬಂಡೆ ಹೇಳಿದ್ದೇನು?

Last Updated : Mar 27, 2021, 11:50 PM IST

ABOUT THE AUTHOR

...view details