ಕರ್ನಾಟಕ

karnataka

ETV Bharat / state

ಕಲಬುರಗಿ : ಸಾಲಗಾರರ ಕಿರುಕುಳ ಆರೋಪ.. ವ್ಯಕ್ತಿ ಆತ್ಮಹತ್ಯೆ - ಕಲಬುರಗಿಯಲ್ಲಿ ವ್ಯಕ್ತಿ ಆತ್ಮಹತ್ಯೆ

ಸಾಲಗಾರರ ಕಿರುಕುಳ ತಾಳಲಾರದೇ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಗೌನಳ್ಳಿ ಗ್ರಾಮದಲ್ಲಿ ನಡೆದಿದೆ.

man-commits-suicide-in-kalaburagi
ಕಲಬುರಗಿ : ಸಾಲಗಾರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ

By

Published : Aug 9, 2023, 4:04 PM IST

Updated : Aug 9, 2023, 4:32 PM IST

ಸಾಲಗಾರರ ಕಿರುಕುಳ ಆರೋಪ.. ವ್ಯಕ್ತಿ ಆತ್ಮಹತ್ಯೆ

ಕಲಬುರಗಿ: ಸಾಲಗಾರರ ಕಿರುಕುಳವೆಂದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಗೌನಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಗೌನಳ್ಳಿ ಗ್ರಾಮದ ನಿವಾಸಿ ಬಸವರಾಜ ಎಂದು ಗುರುತಿಸಲಾಗಿದೆ.

ಬಸವರಾಜ ತನ್ನ 1 ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು, ಟಂಟಂ ವಾಹನ ಚಲಾಯಿಸಿಕೊಂಡು ಜೀವನ ಸಾಗಿಸುತ್ತಿದ್ದ. ಕಳೆದ ಎಂಟು ತಿಂಗಳ ಹಿಂದೆ ತುರ್ತು ಕೆಲಸದ ನಿಮಿತ್ತ ಇದೇ ಗ್ರಾಮದ ವ್ಯಕ್ತಿಯೊಬ್ಬರ ಬಳಿ ಬಸವರಾಜ 5 ಸಾವಿರ ರೂಪಾಯಿ ಸಾಲ ಪಡೆದಿದ್ದ. ಆದರೆ ಸಾಲ ಕೊಟ್ಟ ಎಂಟು ತಿಂಗಳ ನಂತರ, ಐದು ಸಾವಿರಕ್ಕೆ ಬಡ್ಡಿ ಸೇರಿ 45 ಸಾವಿರ ರೂಪಾಯಿ ಕೊಡುವಂತೆ ಸಾಲ ನೀಡಿದ್ದ ವ್ಯಕ್ತಿ ಕಿರುಕುಳ ಕೊಟ್ಟಿದ್ದಾನೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ.

ಅಲ್ಲದೆ ಸಾಲ ವಾಪಸ್ ಕೊಡುವಂತೆ ಕೆಲವರ ಜೊತೆ ಬಸವರಾಜ ಅವರ ಮನೆಗೆ ಬಂದು ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ. ಜೊತೆಗೆ ಜಾತಿ ನಿಂದನೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಾಲ ವಾಪಸ್ ಕೊಡಿ, ಇಲ್ಲವಾದರೆ ನಿಮ್ಮ ಜಮೀನು ನನ್ನ ಹೆಸರಿಗೆ ಬರೆದುಕೊಡಿ ಎಂದು ಕಿರುಕುಳ ನೀಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

ವ್ಯಕ್ತಿಯೊಬ್ಬರಿಂದ ನನ್ನ ಮಗ ಐದು ಸಾವಿರ ಸಾಲ ಪಡೆದುಕೊಂಡಿದ್ದನು. ಅದಕ್ಕೆ ಸಾಲ ನೀಡಿದ ವ್ಯಕ್ತಿಯು ಮೀಟರ್​ ಬಡ್ಡಿಯನ್ನು ವಿಧಿಸಿದ್ದನು. ಈ ಬಗ್ಗೆ ಮನೆಗೆ ಬಂದು ಸಾಲದ ನೀಡಿದ ಹಣವನ್ನು ಬಡ್ಡಿ ಸಮೇತ ನೀಡುವಂತೆ ಒತ್ತಾಯಿಸಿದ್ದನು. ಮಂಗಳವಾರ ಎಲ್ಲ ಮೊತ್ತವನ್ನು ಕೊಡುವುದಾಗಿ ನಾವು ಹೇಳಿದ್ದೆವು. ಆದರೂ ಆ ವ್ಯಕ್ತಿ ಕಿರಿಕಿರಿ ಮಾಡಿ ಹೋಗಿದ್ದಾನೆ. ಇದರಿಂದ ಬೇಸತ್ತು ಮಗ ಬಸವರಾಜ ಆತ್ಮಹತ್ಯೆ ಮಾಡಿಕೊಂಡಿದ್ದಾನೆ- ಮೃತ ಬಸವರಾಜ ತಾಯಿ ಇಂದ್ರಬಾಯಿ

ಆದರೆ ಬಸವರಾಜ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಿಗೆ ಹೊಲದಲ್ಲಿ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ ಎಂದು ಜೇವರ್ಗಿ ಠಾಣೆ ಪೊಲೀಸರು ಸುಳ್ಳು ವರದಿ ಸೃಷ್ಟಿಸಿದ್ದಾರೆ. ಇದಕ್ಕೆ ಅನಕ್ಷರಸ್ಥೆಯಾದ ಬಸವರಾಜನ ಪತ್ನಿ ಕಾಂತಮ್ಮಳಿಂದ ಬಲವಂತವಾಗಿ ಸಹಿ ಹಾಕಿಸಿಕೊಂಡಿದ್ದಾರೆ ಎಂದು ದಲಿತ ಮುಖಂಡ ಅರ್ಜುನ್ ಭದ್ರೆ ಆರೋಪ ಮಾಡಿದ್ದಾರೆ.

ಈ ಘಟನೆ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಶಂಕ್ರಪ್ಪ, ಜಟ್ಟೆಪ್ಪ, ಗುರಪ್ಪ, ಸಿದ್ದರಾಮ, ನೀಲಮ್ಮ, ಮಹಾದೇವಿ, ಬಸಮ್ಮ, ಅಶೋಕ್, ಶಿವರಾಜ ಸೇರಿದಂತೆ ಒಂಬತ್ತು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಉಳಿದವರನ್ನು ಶೀಘ್ರದಲ್ಲೇ ಬಂಧಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ :Depo controller suicide: ರಾಯಬಾಗ ಬಸ್ ನಿಲ್ದಾಣದ ಕಟ್ಟಡದಲ್ಲೇ ಡಿಪೋ ಕಂಟ್ರೋಲರ್ ಆತ್ಮಹತ್ಯೆ

Last Updated : Aug 9, 2023, 4:32 PM IST

ABOUT THE AUTHOR

...view details