ಕಲಬುರಗಿ :ಕೋವಿಡ್ ಅವಧಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಳವಾಗಿವೆ ಎಂದು ಆರೋಪಿಸಿ ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ
ಗಮನಕ್ಕೆ ಬರದೆ ಅದೆಷ್ಟೋ ದೌರ್ಜನ್ಯಗಳು ನಡೆದಿವೆ. ಕೋವಿಡ್ ಅವಧಿಯಲ್ಲಿ ಹತ್ತಾರು ಬಾಲ್ಯ ವಿವಾಹಗಳೂ ನಡೆದಿವೆ. ಕೂಡಲೇ ಮಹಿಳೆಯರಿಗೆ ರಕ್ಷಣೆ ನೀಡಬೇಕು ಹಾಗೂ ಗರ್ಭಿಣಿ ಮತ್ತು ಬಾಣಂತಿಯರಿಗೆ ಸೂಕ್ತ ಚಿಕಿತ್ಸೆ ಸಿಗುವಂತಾಗಬೇಕು..
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಸಿಪಿಐಎಂ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. 89 ಸಾವಿರ ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ಸಚಿವರೇ ಹೇಳಿದ್ದಾರೆ. ಗಮನಕ್ಕೆ ಬರದೆ ಅದೆಷ್ಟೋ ದೌರ್ಜನ್ಯಗಳು ನಡೆದಿವೆ. ಕೋವಿಡ್ ಅವಧಿಯಲ್ಲಿ ಹತ್ತಾರು ಬಾಲ್ಯ ವಿವಾಹಗಳೂ ನಡೆದಿವೆ. ಕೂಡಲೇ ಮಹಿಳೆಯರಿಗೆ ರಕ್ಷಣೆ ನೀಡಬೇಕು ಹಾಗೂ ಗರ್ಭಿಣಿ ಮತ್ತು ಬಾಣಂತಿಯರಿಗೆ ಸೂಕ್ತ ಚಿಕಿತ್ಸೆ ಸಿಗುವಂತಾಗಬೇಕು. ಮಹಿಳೆಯರ ನೆರವಿಗೆ ಹೆಲ್ಪ್ ಲೈನ್ ಸ್ಥಾಪಿಸಬೇಕು.
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.