ಕಲಬುರಗಿ:ಕೊರೊನಾ ಕಟ್ಟಿಹಾಕಲು ನಿನ್ನೆಯಿಂದ ಕಠಿಣ ಕರ್ಫ್ಯೂ ಜಾರಿಯಲ್ಲಿದೆ. ಈ ವೇಳೆ ಅನಗತ್ಯವಾಗಿ ರಸ್ತೆಗೆ ಇಳಿದಿದ್ದ 399 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಕೋವಿಡ್ ಕರ್ಫ್ಯೂ ಉಲ್ಲಂಘನೆ: ಕಲಬುರಗಿಯಲ್ಲಿ 399 ವಾಹನಗಳು ಜಪ್ತಿ - ಕಲಬುರಗಿಯಲ್ಲಿ ಕೋವಿಡ್ ಕರ್ಫ್ಯೂ ಉಲ್ಲಂಘನೆ ಸುದ್ದಿ,
ಕೋವಿಡ್ ಕರ್ಫ್ಯೂ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೊಲೀಸರು ಒಟ್ಟು 399 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
![ಕೋವಿಡ್ ಕರ್ಫ್ಯೂ ಉಲ್ಲಂಘನೆ: ಕಲಬುರಗಿಯಲ್ಲಿ 399 ವಾಹನಗಳು ಜಪ್ತಿ Covid curfew violation, Kalaburagi Covid curfew violation, Kalaburagi Covid curfew violation news, 399 vehicles seize by Kalaburagi police, ಕೋವಿಡ್ ಕರ್ಫ್ಯೂ ಉಲ್ಲಂಘನೆ, ಕಲಬುರಗಿಯಲ್ಲಿ ಕೋವಿಡ್ ಕರ್ಫ್ಯೂ ಉಲ್ಲಂಘನೆ, ಕಲಬುರಗಿಯಲ್ಲಿ ಕೋವಿಡ್ ಕರ್ಫ್ಯೂ ಉಲ್ಲಂಘನೆ ಸುದ್ದಿ, 399 ವಾಹನಗಳನ್ನು ವಶಕ್ಕೆ ಪಡೆದ ಕಲಬುರಗಿ ಪೊಲೀಸರು,](https://etvbharatimages.akamaized.net/etvbharat/prod-images/768-512-11715215-963-11715215-1620707368786.jpg)
ಕಲಬುರಗಿಯಲ್ಲಿ 399 ವಾಹಗಳು ಜಪ್ತಿ
ಕಲಬುರಗಿ ನಗರವೊಂದರಲ್ಲಿಯೇ 328 ದ್ವಿಚಕ್ರ ವಾಹನ, 13 ಆಟೋಗಳು, 58 ನಾಲ್ಕು ಚಕ್ರಗಳ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಈ ವಾಹನಗಳನ್ನು 14 ದಿನಗಳ ಲಾಕ್‌ಡೌನ್ ಅವಧಿ ಮುಗಿದ ಬಳಿಕ ಮಾಲೀಕರಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.