ಕಲಬುರಗಿ: ಜಾಗಿಂಗ್ ಹೊಗುತ್ತೇನೆ ಎಂದು ಹೇಳಿದ ವ್ಯಕ್ತಿ ನಿರ್ಜನ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಗರದ ಕೋರಂಟಿ ಹನುಮಾನ ದೇವಸ್ಥಾನದ ಬಳಿ ನಡೆದಿದೆ.
ಅಡುಗೆ ವಿಚಾರಕ್ಕೆ ಹೆಂಡ್ತಿ ಜೊತೆ ಜಗಳ: ಮರುದಿನವೇ ಶವವಾಗಿ ಪತ್ತೆಯಾದ..! - Kalaburagi police
ಹೆಂಡತಿಗೆ ಅಡುಗೆ ಮಾಡಲು ಬರಲು ಎಂದು ಜಗಳವಾಡಿದ್ದ ವ್ಯಕ್ತಿಯೊಬ್ಬ ಕಲಬರುಗಿಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ರಾಮಮಂದಿರ ನಗರದ ನಿವಾಸಿ ಸಂತೋಷ(30) ಮೃತ ವ್ಯಕ್ತಿ. ಸಂತೋಷ ಮೂಲತಃ ಚಿಂಚೋಳಿ ತಾಲೂಕಿನ ಭಂಟನಹಳ್ಳಿ ಗ್ರಾಮದವನಾಗಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈತ ಕಳೆದ ಐದು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ. ನಿನ್ನೆ ತಡರಾತ್ರಿ ಗಂಡ-ಹೆಂಡತಿ ಮಧ್ಯೆ ತುಸು ಗಲಾಟೆಯಾಗಿದೆ. ಹೆಂಡತಿಗೆ ಅಡುಗೆ ಮಾಡುವುದಕ್ಕೆ ಬರೋದಿಲ್ಲ ಎಂಬ ವಿಚಾರಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿದೆ. ಇತ್ತ ಹೆಂಡತಿಯ ಮನೆಯವರು ಪೋನ್ ಮಾಡಿ ಸಂತೋಷ್ ಹಾಗೂ ಆತನ ತಾಯಿಗೆ ಹೆದರಿಸಿದ್ದಾರೆ. ಆದಾದ ನಂತರ ಬೆಳಗ್ಗೆ ಎಂದಿನಂತೆ ಜಾಗಿಂಗ್ ಹೋದ ಸಂತೋಷ ಹೆಣವಾಗಿ ಪತ್ತೆಯಾಗಿದ್ದಾನೆ.
ಕಳೆದ ಐದು ತಿಂಗಳ ಹಿಂದೆ ನಾಗರತ್ನ ಎಂಬ ಯುವತಿಯ ಜೊತೆ ಮದುವೆ ಮಾಡಿದ್ದರು. ಸಂತೋಷ್ ಮನೆಯಲ್ಲಿ ನಾಗರತ್ನಾಗೆ ಕೆಲಸಕ್ಕೆ ಹೋಗುವಂತೆ ಪೀಡಿಸುತ್ತಿದ್ದನಂತೆ. ಅಲ್ಲದೆ ನಿನಗೆ ಅಡುಗೆ ಮಾಡೋಕೆ ಬರೋದಿಲ್ಲ ಅಂತ ಆಕೆ ಮಾಡಿದ ಅಡುಗೆ ಕೂಡ ಊಟ ಮಾಡುತ್ತಿರಲಿಲ್ಲವಂತೆ. ನಿನ್ನೆ ರಾತ್ರಿಯು ಕೂಡ ಸಂತೋಷ್ ತನ್ನ ಹೆಂಡತಿಯ ಮಾಡಿದ ಅಡುಗೆ ಊಟ ಮಾಡದೆ ಉಪವಾಸ ಮಲಗಿದ್ದ. ಘಟನೆ ತಿಳಿದ ನಂತರ ಸ್ಥಳಕ್ಕೆ ಆಗಮಿಸಿದ ಸ್ಟೇಷನ್ ಬಜಾರ್ ಪೊಲೀಸ್ ಸಂತೋಷನ ಅರೆಬೆಂದ ಶವದ ಬಳಿ ಸಿಕ್ಕ ಆದಾರ ಕಾಡ್೯ ಆದಾರ ಮೇಲೆ ಸಂತೋಷ ಕುಟುಂಬಸ್ಥರ ಪತ್ತೆ ಹಚ್ಚಿ ಸುದ್ದಿ ತಿಳಿಸಿದ್ದಾರೆ. ಸದ್ಯ ಪೊಲೀಸರು ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.