ಕಲಬುರಗಿ:ಮಹಾಮಾರಿ ಕೊರೊನಾ ಹಳ್ಳಿ ಪ್ರದೇಶದ ಜನರಲ್ಲೂ ತೀವ್ರ ಆತಂಕ ಸೃಷ್ಟಿಸಿದೆ. ಊರಿಗೆ ಕೊರೊನಾ ವೈರಸ್ ಹರಡದಂತೆ ಮಾಡಲು ಗ್ರಾಮಸ್ಥರೇ ರಸ್ತೆಗಳನ್ನು ಬಂದ್ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ವಳವಂಡವಾಡಿ ಗ್ರಾಮದಲ್ಲಿ ಸ್ವತಃ ಗ್ರಾಮಸ್ಥರೇ ಕೊರೊನಾ ವಿರುದ್ಧ ಹೋರಾಟಕ್ಕೆ ನಿಂತಿದ್ದು ಸೆಲ್ಫ್ ಕ್ವಾರಂಟೈನ್ ಜಾರಿ ಮಾಡಿದ್ದಾರೆ.
ಕೊರೊನಾ ವೈರಸ್ ಹರಡಬಾರದೆಂದು ಸಂಪೂರ್ಣ ಗ್ರಾಮವೇ ಸೆಲ್ಫ್ ಕ್ವಾರಂಟೈನ್..! ಗ್ರಾಮಕ್ಕೆ ಬರೋ ಎಲ್ಲ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಿ ರಸ್ತೆಗಳಿಗೆ ಬೇಲಿ ಹಾಕಿರೋ ಗ್ರಾಮಸ್ಥರು ಗ್ರಾಮಕ್ಕೆ ಬೇರೆಯವರ ಪ್ರವೇಶ ನಿರ್ಬಂಧಿಸಿ ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ. ಹೊರಗಡೆಯಿಂದ ಬರೋ ವಾಹನಗಳನ್ನು ತಡೆದು ಊರಿನೊಳಗೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ.
ಜೊತೆಗೆ ಮನೆಯಿಂದ ಯಾರೂ ಕೂಡಾ ಹೊರಗಡೆ ಬಾರದಂತೆ ಕ್ವಾರಂಟೈನ್ ಮಾಡಿಕೊಳ್ಳವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.