ಕಲಬುರಗಿ: ನಗರದಲ್ಲಿ ಮತ್ತೊಂದು ಕೊರೊನಾ ವೈರಸ್ ದೃಢಪಟ್ಟಿದ್ದು ಮತ್ತೆ ರಾಜ್ಯದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.
ಕೊರೊನಾಗೆ ವೃದ್ಧ ಬಲಿಯಾದ ಹಿನ್ನೆಲೆ ಆತನ ಕುಟುಂಬದ ನಾಲ್ವರು ಸದಸ್ಯರ ಥ್ರೋಟ್ ಸ್ಯಾಂಪಲ್ನ್ನು ಲ್ಯಾಬ್ ಟೆಸ್ಟ್‌ಗಾಗಿ ಕಳುಹಿಸಿ ಕೊಡಲಾಗಿತ್ತು. ನಿನ್ನೆಯಷ್ಟೇ ಮೂವರ ವರದಿ ನೆಗೆಟಿವ್ ಬಂದಿತ್ತು. ವರದಿಯಿಂದ ಸ್ವಲ್ಪ ನಿರಾಳವಾಗುವ ಮುನ್ನವೇ ಇದೀಗ ಉಳಿದಿದ್ದ ಓರ್ವರಿಗೆ ಪಾಸಿಟಿವ್ ಬಂದಿರುವುದು ಮತ್ತೆ ಜನ ಆತಂಕಕ್ಕೆ ಒಳಗಾಗಿದ್ದಾರೆ.