ಕಲಬುರಗಿ:ಸಂಸದ ಉಮೇಶ್ ಜಾಧವ್ ಕುಟುಂಬದ ಸದಸ್ಯರು ಸೇರಿದಂತೆ ಒಟ್ಟು 12 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಉಮೇಶ್ ಜಾಧವ್ ಕುಟುಂಬದ 12 ಸದಸ್ಯರಿಗೆ ಕೊರೊನಾ - kalaburagi corona news
ಕುಟುಂಬದ ಸದಸ್ಯರಿಗೆ ಸೋಂಕು ತಗುಲಿರುವ ಕುರಿತು ಸಂಸದ ಉಮೇಶ್ ಜಾಧವ್ ಟ್ವೀಟ್ ಮಾಡಿದ್ದು, ಒಟ್ಟು 12 ಜನರಿಗೆ ಕೊರೊನಾ ಸೋಂಕು ತಗುಲಿದೆ.
![ಉಮೇಶ್ ಜಾಧವ್ ಕುಟುಂಬದ 12 ಸದಸ್ಯರಿಗೆ ಕೊರೊನಾ ಸಂಸದ ಉಮೇಶ್ ಜಾಧವ್](https://etvbharatimages.akamaized.net/etvbharat/prod-images/768-512-8531000-646-8531000-1598203199697.jpg)
ಕುಟುಂಬದ ಸದಸ್ಯರಿಗೆ ಸೋಂಕು ತಗುಲಿರುವ ಕುರಿತು ಜಾಧವ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಉಮೇಶ್ ಜಾಧವ್ ಪತ್ನಿ, ಮಗಳು, ಸೊಸೆಗೂ ಸೋಂಕು ತಗುಲಿದೆ. ಪುತ್ರ ಶಾಸಕ ಅವಿನಾಶ್ ಜಾಧವ್, ಅವರ ಪತ್ನಿ, ಜಾಧವ್ ಅಳಿಯನಿಗೂ ಸೋಂಕು ತಗುಲಿದೆ. ಜೊತೆಗೆ ಉಮೇಶ್ ಜಾಧವ್ ಅವರ ಇಬ್ಬರು ಪಿ.ಎ, ಅವಿನಾಶ್ ಜಾಧವ್ ಅವರ ಓರ್ವ ಪಿಎಗೆ ಹಾಗೂ ಇಬ್ಬರು ಚಾಲಕರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕುಟುಂಬದ 12 ಜನರಿಗೆ ಸೋಂಕು ದೃಢಪಟ್ಟಿರೋದಾಗಿ ಜಾಧವ್ ತಿಳಿಸಿದ್ದಾರೆ. ಈ ಮುಂಚೆ ಉಮೇಶ್ ಜಾಧವ್, ಅವಿನಾಶ್ ಜಾಧವ್ ಹಾಗೂ ಅಳಿಯ ಅರುಣ್ ಪವಾರ್ಗೆ ಸೋಂಕು ದೃಢಪಟ್ಟಿತ್ತು. ಇದೀಗ ಮತ್ತೆ 12 ಜನರಿಗೆ ಸೋಂಕಿರೋದು ದೃಢವಾಗಿದೆ. ಎಲ್ಲರೂ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿದ್ದಾರೆ.