ಕರ್ನಾಟಕ

karnataka

ETV Bharat / state

ಕೊರೊನಾ ಶಂಕೆ: 36 ಜನರ ಸ್ಯಾಂಪಲ್​​ನಲ್ಲಿ, 24 ವರದಿ ನೆಗೆಟಿವ್- ಡಿಸಿ ಪ್ರಕಟ

ಕೊರೊನಾ ಶಂಕೆ ಹಿನ್ನೆಲೆ ಈವರೆಗೆ ಕಳುಹಿಸಲಾದ ಒಟ್ಟು 36 ಜನರ ಸ್ಯಾಂಪಲ್​​ನಲ್ಲಿ, 24 ಜನರ ವರದಿ ನೆಗೆಟಿವ್ ಬಂದಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ತಿಳಿಸಿದ್ದಾರೆ.

DC B. Sharath
ಜಿಲ್ಲಾಧಿಕಾರಿ ಬಿ. ಶರತ್

By

Published : Mar 23, 2020, 8:11 PM IST

ಕಲಬುರಗಿ:ಜಿಲ್ಲೆಯಲ್ಲಿ ಕೊರೊನಾ ಶಂಕೆ ಹಿನ್ನೆಲೆ ಈವರೆಗೆ ಕಳುಹಿಸಲಾದ ಒಟ್ಟು 36 ಜನರ ಸ್ಯಾಂಪಲ್​​ನಲ್ಲಿ, 24 ಜನರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಬಿ. ಶರತ್ ತಿಳಿಸಿದ್ದಾರೆ.

ಕೊರೊನಾ ಭೀತಿ ಆರಂಭದಿಂದ ಇಲ್ಲಿವರೆಗೆ ಒಟ್ಟು 36 ಜನ ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿದೆ. ಇದರಲ್ಲಿ 24 ನೆಗೆಟಿವ್, ಮೃತ ವೃದ್ಧ ಮಹ್ಮದ ಸಿದ್ದಕಿ, ಆತನ ಸಂಬಂಧಿ ಮತ್ತು ಚಿಕಿತ್ಸೆ ನೀಡಿದ ವೈದ್ಯ 3 ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. 7 ಜನರ ಸ್ಯಾಂಪಲ್ ರಿಪೋರ್ಟ್ ಇನ್ನೂ ಬರಬೇಕಾಗಿದೆ.

ಜಿಲ್ಲಾಧಿಕಾರಿಯಿಂದ ಹೆಲ್ತ್​​ ಬುಲೆಟಿನ್​​​ ಬಿಡುಗಡೆ

ತಾಂತ್ರಿಕ ದೋಷದ ಕಾರಣದಿಂದ ಇಬ್ಬರ ಗಂಟಲ ದ್ರವವನ್ನು ಮರು ಪರೀಕ್ಷೆಗೆ ಕಳುಹಿಸಲಾಗಿದೆ. ಒಟ್ಟು 6 ಜನರನ್ನು ಇಎಸ್‌ಐ ಆಸ್ಪತ್ರೆ ಐಸೋಲೇಷನ್​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 876 ಜನರನ್ನು ಹೋಮ್ ಕ್ವಾರೆಂಟೈನ್​​ನಲ್ಲಿ ಇಟ್ಟು ನಿಗಾವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಮಾಹಿತಿ ನೀಡಿದ್ದಾರೆ.

ABOUT THE AUTHOR

...view details