ಕಲಬುರಗಿ:ಜಿಲ್ಲೆಯಲ್ಲಿಂದು 241 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 13,491ಕ್ಕೆ ಏರಿಕೆಯಾಗಿದೆ.
ಕಲಬುರಗಿಯಲ್ಲಿಂದು 241 ಜನರಿಗೆ ಕೊರೊನಾ..195 ಮಂದಿ ಗುಣಮುಖ - Kalaburagi corona case
ಕಲಬುರಗಿಯಲ್ಲಿಂದು 241 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 195 ಜನರು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಕಲಬುರಗಿಯಲ್ಲಿಂದು 241 ಜನರಿಗೆ ಕೊರೊನಾ..195 ಮಂದಿ ಗುಣಮುಖ
ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ 70 ವರ್ಷದ ವೃದ್ದೆ ಹಾಗೂ ಕಪನೂರ ಪ್ರದೇಶದ 74 ವರ್ಷದ ವೃದ್ದ ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 233ಕ್ಕೆ ಏರಿಕೆಯಾಗಿದೆ. ಅಧಿಕ ರಕ್ತದೊತ್ತಡನಿಂದ ಬಳಲುತ್ತಿದ್ದ ಇವರಿಗೆ ಕೊರೊನಾ ಸೋಂಕು ತಗುಲಿದ್ದ ಪರಿಣಾಮ ತೀವ್ರ ಉಸಿರಾಟದ ಸಮಸ್ಯೆಯುಂಟಾಗಿ ಮೃತಪಟ್ಟಿದ್ದಾರೆ.
ಇಂದು 195 ಜನರು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದು, ಈವರೆಗೆ ಒಟ್ಟು 11,143 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ, ಜಿಲ್ಲೆಯಲ್ಲಿ 2,115ಸಕ್ರಿಯ ಪ್ರಕರಣಗಳಿವೆ.