ಕರ್ನಾಟಕ

karnataka

ETV Bharat / state

ವಾಡಿ ಪಟ್ಟಣದಲ್ಲಿ 2 ವರ್ಷದ ಮಗುವಿಗೆ ಕೊರೊನಾ ಪಾಸಿಟಿವ್: ಪ್ರಿಯಾಂಕ್ ಖರ್ಗೆ - Corona Positive for 2-Year-Old Child in Wadi Town

ವಾಡಿ ಪಟ್ಟಣದ ಪಿಲಕಮ್ಮ ಪ್ರದೇಶದಲ್ಲಿ 2 ವರ್ಷದ ಮಗುವಿಗೆ ಕೊರೊನಾ ವೈರಸ್ ತಗುಲಿರುವದು ದೃಡಪಟ್ಟಿದೆ. ಪಂಚಾಯತ್ ಅಧಿಕಾರಿಗಳೊಂದಿಗೂ ಚರ್ಚೆ ಮಾಡಿ ಚಿತ್ತಾಪುರ ತಾಲೂಕನ್ನು ಸಂಪೂರ್ಣ ಲಾಕ್‌ಡೌನ್ ಮಾಡುವ ಮೂಲಕ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಹಾಗಾಗಿ ಜನರು ಆತಂಕಗೊಳ್ಳುವ ಅಗತ್ಯವಿಲ್ಲವೆಂದು ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

MlA Priyank Kharge tweet
ಶಾಸಕ ಪ್ರಿಯಾಂಕ್ ಖರ್ಗೆ

By

Published : Apr 12, 2020, 6:17 PM IST

ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಪಿಲಕಮ್ಮ ಪ್ರದೇಶದಲ್ಲಿ 2 ವರ್ಷದ ಮಗುವಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಮ್ಮ ಫೇಸ್ ಬುಕ್, ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ವಾಡಿ ಪಟ್ಟಣದ ಪಿಲಕಮ್ಮ ಪ್ರದೇಶದಲ್ಲಿ 2 ವರ್ಷದ ಮಗುವಿಗೆ ಕೊರೊನಾ ವೈರಸ್ ತಗುಲಿರುವದು ದೃಢಪಟ್ಟಿದೆ. ಈಗಾಗಲೇ ತಾಲೂಕು ವೈದ್ಯಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದೇನೆ. ಪಂಚಾಯತ್ ಅಧಿಕಾರಿಗಳೊಂದಿಗೂ ಚರ್ಚೆ ಮಾಡಿ ಚಿತ್ತಾಪುರ ತಾಲೂಕನ್ನು ಸಂಪೂರ್ಣ ಲಾಕ್‌ಡೌನ್ ಮಾಡುವ ಮೂಲಕ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಹಾಗಾಗಿ ಜನರು ಆತಂಕಗೊಳ್ಳುವ ಅಗತ್ಯವಿಲ್ಲವೆಂದು ಅವರು ಟ್ವಿಟರ್ ಹಾಗೂ ಫೇಸ್ ಬುಕ್​ನಲ್ಲಿ ಮನವಿ ಮಾಡಿದ್ದಾರೆ.
ಈಗಾಗಲೇ ಕಲಬುರಗಿಯಲ್ಲಿ 12 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದೀಗ 13 ನೇ ಪಾಸಿಟಿವ್ ಪ್ರಕರಣ ಪತ್ತೆ ಆಯ್ತಾ?, ಅದರಲ್ಲೂ 2 ವರ್ಷದ ಮಗುವಿಗೂ ಕೊರೊನಾ ಸೊಂಕು ತಗುಲಿದೆಯಾ ಎಂಬ ಆತಂಕ ಜಿಲ್ಲೆಯ ಜನರಲ್ಲಿ ಮನೆ ಮಾಡಿದೆ. ಮಗುವಿಗೆ ಕೊರೊನಾ ವೈರಸ್ ತಗುಲಿರುವ ಬಗ್ಗೆ ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ABOUT THE AUTHOR

...view details