ಕಲಬುರಗಿ:ಕೊರೊನಾ ವೈರಸ್ ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿದ್ದು, ಇದೀಗ ಜಿಲ್ಲಾಡಳಿತ ಕೊರೊನಾ ಹರಡುವಿಕೆ ತಡೆಯಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಕೊರೊನಾ ಭೀತಿ: ಕಲಬುರಗಿಯಲ್ಲಿ ಇಡೀ ನಗರ ಸ್ವಚ್ಛಗೊಳಿಸುತ್ತಿರುವ ಮಹಾನಗರ ಪಾಲಿಕೆ - cleans up
ಕಲಬುರಗಿಯಲ್ಲಿ ಎರಡ್ಮೂರು ದಿನಕ್ಕೊಮ್ಮೆ ಕಸ ವಿಲೇವಾರಿ ಮಾಡುತ್ತಿದ್ದ ಮಹಾನಗರ ಪಾಲಿಕೆ ಇದೀಗ ಕೊರೊನಾ ಹರಡುವ ಭೀತಿಯಿಂದಾಗಿ ನಿತ್ಯ ಕಸ ವಿಲೇವಾರಿ ಮಾಡುವ ಕಾರ್ಯ ಮಾಡುತ್ತಿದೆ.
ಕೊರೊನಾ ವೈರಸ್ ಹೆಚ್ಚು ಹರಡುವ ಭೀತಿಯಿಂದಾಗಿ ಇಡೀ ನಗರವನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಮಹಾನಗರ ಪಾಲಿಕೆ ಕೈಗೊಂಡಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 55 ವಾರ್ಡ್ ಗಳಲ್ಲಿ ಪ್ರಮುಖ ರಸ್ತೆ ಸೇರಿದಂತೆ ಬಡಾವಣೆಯ ಒಳಭಾಗದ ರಸ್ತೆ, ಫುಟ್ ಪಾತ್ ಗಳಲ್ಲಿ ಕಸ ಗುಡಿಸಿ ಸ್ವಚ್ಚಗೊಳಿಸುತ್ತಿದ್ದಾರೆ.
ಎರಡ್ಮೂರು ದಿನಕ್ಕೊಮ್ಮೆ ಕಸ ವಿಲೇವಾರಿ ಮಾಡುತ್ತಿದ್ದ ಪಾಲಿಕೆ ಇದೀಗ ಸಂಗ್ರಹವಾದ ಕಸವನ್ನು ನಿತ್ಯ ವಿಲೇವಾರಿ ಮಾಡುತ್ತಿದೆ. ಗಬ್ಬೆದ್ದು ನಾರುತ್ತಿದ್ದ ನಗರದ ಕೆಲ ರಸ್ತೆಗಳು, ಬಡಾವಣೆಗಳು ಇದೀಗ ಸಂಪೂರ್ಣ ಕ್ಲೀನ್ ಆಗಿವೆ. ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಜಿಲ್ಲಾಧಿಕಾರಿಗಳ ಖಡಕ್ ಸೂಚನೆಗೆ ಎಚ್ಚೆತ್ತ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಬೆಳ್ಳಂ ಬೆಳಗ್ಗೆ ಫೀಲ್ಡಿಗಿಳಿದು ರಸ್ತೆ, ಬಡಾವಣೆಗಳನ್ನು ಗುಡಿಸಿ ಸ್ವಚ್ಚಗೊಳಿಸುತ್ತಿದ್ದಾರೆ.