ಕಲಬುರಗಿ: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಕರಿನೆರಳು ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ಮೇಲೂ ಬಿದ್ದಿದೆ.
ಕಲಬುರಗಿ ಧಾರ್ಮಿಕ ಕ್ಷೇತ್ರಗಳ ಮೇಲೂ ಕೊರೊನಾ ಕರಿ ನೆರಳು - ಕಲಬುರಗಿ ಧಾರ್ಮಿಕ ಕ್ಷೇತ್ರಗಳ ಮೇಲೆ ಕೊರೊನಾ ಎಫೆಕ್ಟ್
ಕೊರೊನಾ ಭೀತಿ ಹಿನ್ನೆಲೆ ಕಲಬುರಗಿಯ ಅಫಜಲಪುರ ತಾಲೂಕಿನ ಗಾಣಗಾಪುರ ದತ್ತಾತ್ರೇಯ ಸನ್ನಿಧಿ ಭಕ್ತರಿಲ್ಲದೆ ಬಣಗುಡುತ್ತಿದೆ.
ಭಕ್ತರಿಲ್ಲದೆ ಬಣಗುಡುತ್ತಿದೆ ಗಾಣಗಾಪುರ ದತ್ತಾತ್ರೇಯ ಸನ್ನಿಧಿ
ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಅಫಜಲಪುರ ತಾಲೂಕಿನ ಗಾಣಗಾಪುರ ದತ್ತಾತ್ರೇಯ ಸನ್ನಿಧಿ ಸೇರಿದಂತೆ ವಿವಿಧ ದೇವಾಲಯಗಳು ಭಕ್ತರಿಲ್ಲದೆ ಬಿಕೋ ಎನ್ನುತ್ತಿವೆ. ಪ್ರತಿನಿತ್ಯ ನೂರಾರು ಭಕ್ತರಿಂದ ತುಂಬಿ ಗಿಜುಗುಡುತ್ತಿದ್ದ ಗಾಣಗಾಪುರ ಕೊರೊನಾ ಭೀತಿಯಿಂದ ಖಾಲಿ ಖಾಲಿಯಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ ಕಾರಣ ಮತ್ತು ನಿನ್ನೆಯಷ್ಟೆ ಇನ್ನೋರ್ವನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಜನರು ಮನೆಯಿಂದ ಹೊರಬರಲು ಆತಂಕಪಡುತ್ತಿದ್ದಾರೆ.