ಕರ್ನಾಟಕ

karnataka

ETV Bharat / state

ಈ ಗ್ರಾಮಗಳಿಗೆ ಕೊರೊನಾ ಮಾತ್ರವಲ್ಲ, ಹೊರಗಿನವರಿಗೂ ಪ್ರವೇಶವಿಲ್ಲ! - ಕಲಬುಗಿ ನ್ಯೂಸ್​

ದೇಶ, ರಾಜ್ಯವನ್ನು ಈಗಾಗಲೇ ಪ್ರವೇಶಿಸಿ ಎಲ್ಲಡೆ ಆವರಿಸುತ್ತಿರುವ ಕೊರೊನಾ ವೈರಸ್​ ಗ್ರಾಮಕ್ಕೂ ಹರಡಬಾರದು ಎಂಬ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯ ಕಲಕಂಭ, ಅಳ್ಳೊಳ್ಳಿ ಹಾಗೂ ಬಿಬ್ಬಳ್ಳಿ ಗ್ರಾಮಗಳು ಸ್ವಯಂ ನಿರ್ಬಂಧ ಹೇರಿಕೊಂಡಿವೆ.

No entry to sedam village
ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳುತ್ತಿರುವ ಗ್ರಾಮೀಣದ ಜನ

By

Published : Mar 27, 2020, 8:34 PM IST

ಸೇಡಂ: ಕೊರೊನಾ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಗ್ರಾಮೀಣ ಭಾಗದ ಜನ ಸ್ವಯಂ ದಿಗ್ಬಂಧನಕ್ಕೆ ಮುಂದಾಗಿದ್ದಾರೆ. ತಾಲೂಕಿನ ಕಲಕಂಭ, ಅಳ್ಳೊಳ್ಳಿ ಹಾಗೂ ಬಿಬ್ಬಳ್ಳಿ ಗ್ರಾಮಸ್ಥರು ತಮ್ಮ ಗ್ರಾಮದ ಪ್ರವೇಶ ದ್ವಾರದ ಬಳಿ ಮುಳ್ಳು ಕಂಟಿಗಳ ಬೇಲಿ ನಿರ್ಮಿಸಿಕೊಂಡು ಹೊರಗಿನವರು ಗ್ರಾಮಕ್ಕೆ ಪ್ರವೇಶ ಮಾಡದಂತೆ ಎಚ್ಚರ ವಹಿಸುತ್ತಿದ್ದಾರೆ.

ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳುತ್ತಿರುವ ಗ್ರಾಮೀಣ ಭಾಗದ ಜನ

ಇನ್ನು ಹೊರ ದೇಶ, ಹೊರ ರಾಜ್ಯಗಳಿಂದ ಬರುವ ಜನರು ಮೊದಲು ವೈದ್ಯಕೀಯ ತಪಾಸಣೆಗೆ ಒಳಪಡಬೇಕು. ನಂತರವೇ ಗ್ರಾಮಕ್ಕೆ ಪ್ರವೇಶ ಮಾಡಬೇಕು. ಇಲ್ಲವಾದಲ್ಲಿ ಗ್ರಾಮದ ಒಳಗೆ ಬರುವಂತಿಲ್ಲ. ನಾವೂ ಕೂಡ ಯಾವುದೇ ಕಾರಣಕ್ಕೂ ಗ್ರಾಮದಿಂದ ಹೊರಗೆ ಹೋಗುವುದಿಲ್ಲವೆಂದು ಸ್ವಯಂ ನಿರ್ಬಂಧ ಹೇರಿಕೊಂಡಿದ್ದಾರೆ.

ABOUT THE AUTHOR

...view details