ಕಲಬುರಗಿ: ನಿನ್ನೆಯಷ್ಟೇ ಜಿಲ್ಲಾಧಿಕಾರಿ ಬಿ.ಶರತ್ ಅವರು ತುರ್ತು ಪರಿಸ್ಥಿತಿ ಹೊರತುಪಡಿಸಿ ಮನೆಯಿಂದ ಯಾರೂ ಹೊರಬರಬೇಡಿ ಎಂದು ಆದೇಶ ನೀಡಿದ್ದರು. ಇಂದು ಅದರ ಪರಿಣಾಮ ಜಿಲ್ಲೆಯಾದ್ಯಂತ ಬಂದ್ ವಾತಾವರಣ ಕಂಡುಬಂದಿತು.
ಕೊರೊನಾ ಎಫೆಕ್ಟ್: ಕಲಬುರಗಿ ಖಾಲಿ ಖಾಲಿ! - ತುರ್ತು ಪರಿಸ್ಥಿತಿ
ಜಿಲ್ಲಾಧಿಕಾರಿ ಬಿ.ಶರತ್ ಅವರು ತುರ್ತು ಪರಿಸ್ಥಿತಿ ಹೊರತುಪಡಿಸಿ ಮನೆಯಿಂದ ಯಾರೂ ಹೊರಬರಬೇಡಿ ಎಂದು ಆದೇಶ ನೀಡಿದ್ದರು. ಇಂದು ಅದರ ಪರಿಣಾಮ ಜಿಲ್ಲೆಯಾದ್ಯಂತ ಬಂದ್ ರೀತಿಯ ವಾತಾವರಣ ಕಂಡುಬಂತು.

ಬಿಕೋ ಎನ್ನುತ್ತಿದೆ ಕಲಬುರಗಿ
ಬಿಕೋ ಎನ್ನುತ್ತಿದೆ ಕಲಬುರಗಿ
ನಗರದ ಎಸ್ವಿಪಿ ವೃತ್ತ, ಜಗತ್ ಸೂಪರ್ ಮಾರ್ಕೆಟ್ ಸೇರಿದಂತೆ ಕೆಲವು ಕಡೆ ಬಿಕೋ ಎನ್ನುತ್ತಿತ್ತು. ಜಿಲ್ಲಾಡಳಿತದ ಆದೇಶದಂತೆ ಮಾಲ್, ಮಲ್ಟಿಪ್ಲೆಕ್ಸ್, ಹೋಟೆಲ್ಗಳನ್ನು ಬಂದ್ ಮಾಡಲಾಗಿತ್ತು.
ಕೊರೊನಾ ವೈರಸ್ನಿಂದ ಜಿಲ್ಲೆಯಲ್ಲಿ ವೃದ್ಧನೊರ್ವ ಸಾವನ್ನಪ್ಪಿದ್ದು, ಇಂದು ಅದೇ ಕುಟುಂಬದ ಮತ್ತೋರ್ವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಅಲ್ಲಿನ ಜನರಿಗೆ ಭಯದ ವಾತಾವರಣ ಉಂಟಾಗುವಂತೆ ಮಾಡಿದೆ.