ಕಲಬುರಗಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತೆ ನಾಲ್ಕು ಮಂದಿ ಮೃತಪಟ್ಟಿದ್ದು, ಕೊರೊನಾಗೆ ಬಲಿಯಾದವರ ಸಂಖ್ಯೆ 179ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಮಾಹಿತಿ ನೀಡಿದ್ದಾರೆ.
ಕಲಬುರಗಿಯಲ್ಲಿ ಕೊರೊನಾಗೆ ಮತ್ತೆ ನಾಲ್ವರು ಬಲಿ: ಸಾವಿನ ಸಂಖ್ಯೆ 179ಕ್ಕೆ ಏರಿಕೆ - Corona
ಮಹಾಮಾರಿ ಕೊರೊನಾಗೆ ಕಲಬುರಗಿ ಜಿಲ್ಲೆ ತತ್ತರಿಸಿದ್ದು, ಮತ್ತೆ ನಾಲ್ವರನ್ನು ಬಲಿ ಪಡೆದು ಆತಂಕ ಸೃಷ್ಟಿಸಿದೆ.
![ಕಲಬುರಗಿಯಲ್ಲಿ ಕೊರೊನಾಗೆ ಮತ್ತೆ ನಾಲ್ವರು ಬಲಿ: ಸಾವಿನ ಸಂಖ್ಯೆ 179ಕ್ಕೆ ಏರಿಕೆ dsd](https://etvbharatimages.akamaized.net/etvbharat/prod-images/768-512-8499188-thumbnail-3x2-vi.jpg)
ತೀವ್ರ ಉಸಿರಾಟದ ತೊಂದರೆ ಹಿನ್ನೆಲೆ ಚಿಂಚೋಳಿ ತಾಲೂಕಿನ ಪೋಲಕಪಲ್ಲಿ ಗ್ರಾಮದ 72 ವರ್ಷದ ವೃದ್ಧೆ ಆ. 18ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಉಸಿರಾಟ ತೊಂದರೆಯಿಂದ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ 60 ವರ್ಷದ ವೃದ್ಧೆ ಆ. 15ರಂದು ಆಸ್ಪತ್ರೆಗೆ ದಾಖಲಾಗಿ ಆ. 19 ರಂದು ನಿಧನರಾಗಿದ್ದಾರೆ.
ಐಎಲ್ಐ ಜೊತೆಗೆ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಕಲಬುರಗಿಯ ಆದರ್ಶ ನಗರದ 57 ವರ್ಷದ ಮಹಿಳೆ ಆ. 16ರಂದು ಆಸ್ಪತ್ರೆಗೆ ದಾಖಲಾಗಿ ಆ. 19ರಂದು ಮೃತಪಟ್ಟಿದ್ದಾರೆ. ಉಸಿರಾಟದ ತೊಂದರೆಯಿಂದ ಆಳಂದ ತಾಲೂಕಿನ ಖಜೂರಿ ಗ್ರಾಮದ 65 ವರ್ಷದ ವೃದ್ಧ ಆ. 17ರಂದು ಆಸ್ಪತ್ರೆಗೆ ದಾಖಲಾಗಿ ಆ. 19ರಂದು ನಿಧನರಾಗಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ.