ಕರ್ನಾಟಕ

karnataka

ETV Bharat / state

ವರ್ಷದ ಹಿಂದಿನ ಕಳ್ಳತನ ಪ್ರಕರಣ ಆರೋಪಿ ಬಂಧಿಸಿದ ಸೇಡಂ ಪೊಲೀಸರು..! - ಸೇಡಂ ಪೊಲೀಸರು

ವರ್ಷದ ಹಿಂದೆ ಪಟ್ಟಣದಲ್ಲಿ ನಡೆದ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಸೇಡಂ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿಪಿಐ ರಾಜಶೇಖರ್​ ಹಳಗೋದಿ, ಪಿಎಸ್ಐ ನಾನಾಗೌಡ ಮತ್ತು ಮಳಖೇಡ ಪಿಎಸ್ಐ ಶಿವಶಂಕರ ಸಾಹು ನೇತೃತ್ವದ ತಂಡ ನಿರಂತರ ಕಾರ್ಯಾಚರಣೆ ನಡೆಸಿ ಎಪಿಎಂಸಿ ಬಳಿ ಶಾಮ ಗೋವಿಂದ ಕಾಳೆ ಎಂಬಾತನನ್ನು ಬಂಧಿಸಿದ್ದಾರೆ.

ಸೇಡಂ ಪೊಲೀಸರು
ಸೇಡಂ ಪೊಲೀಸರು

By

Published : Feb 3, 2021, 5:57 PM IST

ಸೇಡಂ: ವರ್ಷದ ಹಿಂದೆ ಪಟ್ಟಣದಲ್ಲಿ ನಡೆದ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಸೇಡಂ ಪೊಲೀಸರು ಯಶಸ್ವಿಯಾಗಿದ್ದು, ಇನ್ನುಳಿದ ನಾಲ್ವರಿಗಾಗಿ ಬಲೆ ಬೀಸಿದ್ದಾರೆ.

ಸಿಪಿಐ ರಾಜಶೇಖರ ಹಳಗೋದಿ, ಪಿಎಸ್ಐ ನಾನಾಗೌಡ ಮತ್ತು ಮಳಖೇಡ ಪಿಎಸ್ಐ ಶಿವಶಂಕರ ಸಾಹು ನೇತೃತ್ವದ ತಂಡ ನಿರಂತರ ಕಾರ್ಯಾಚರಣೆ ನಡೆಸಿ ಎಪಿಎಂಸಿ ಬಳಿ ಶಾಮ ಗೋವಿಂದ ಕಾಳೆ ಎಂಬಾತನನ್ನು ಬಂಧಿಸಿದ್ದಾರೆ. ಈತ ಕಳೆದ ವರ್ಷ ಪಟ್ಟಣದ ಅನೇಕ ಭಾಗಗಳಲ್ಲಿ ತನ್ನ ತಂಡದೊಂದಿಗೆ ಕಳ್ಳತನ ನಡೆಸಿ ತಲೆಮರೆಸಿಕೊಂಡಿದ್ದ. ಬಂಧಿತನಿಂದ 4 ಲಕ್ಷ ನಗದು, 100 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ನಾಲ್ವರನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಸಿಪಿಐ ರಾಜಶೇಖರ ಹಳಗೋದಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಜಗದೀಶ, ಬಿಳೇನ ಸಿದ್ದಯ್ಯ, ಆಸೀಫಮಿಯಾ, ಅಣ್ಣಾರಾವ, ಬಾಬು, ಮಾಣಿಕ ಪಾಲ್ಗೊಂಡಿದ್ದರು.

ABOUT THE AUTHOR

...view details