ಕರ್ನಾಟಕ

karnataka

ETV Bharat / state

ಏಕಾಏಕಿ ಹಿಂಗ್‌ ಕೆಲಸದಿಂದ್‌ ತೆಗೆದ್ ಹಾಕಿದ್ರೇ ನಾವೇನ್‌ ಹೊಟ್ಟೆಗೆ ಮಣ್ಣ್‌ ತಿನ್ಬೇಕೇನ್ರೀ ಅಂತೀನಿ.. - Kalburgi

ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಗುತ್ತಿಗೆ  ನೌಕರರನ್ನು ಕೆಲಸದಿಂದ ತೆಗೆದು ಹಾಕಿರುವ ಕ್ರಮ ಖಂಡಿಸಿ ಪರಿಹಾರ ಒದಗಿಸುವಂತೆ ಸಚಿವರಿಗೆ ನೌಕರರು ಮನವಿ ಮಾಡಿದರು.

ಗುತ್ತಿಗೆ ನೌಕರರ ಪ್ರತಿಭಟನೆ

By

Published : Jun 19, 2019, 12:11 AM IST

ಕಲಬುರಗಿ: ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಗುತ್ತಿಗೆ ಆಧಾರದ ನೌಕರರನ್ನು ಕೆಲಸದಿಂದ ತೆಗೆದು ಹಾಕಿರುವ ಕ್ರಮವನ್ನು ಖಂಡಿಸಿ ಗುತ್ತಿಗೆ ನೌಕರರು ಪರಿಹಾರ ಒದಗಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.

ಗುತ್ತಿಗೆ ನೌಕರರ ಪ್ರತಿಭಟನೆ

ಕಳೆದ ಏಳೆಂಟು ವರ್ಷಗಳಿಂದಲೂ 40ಕ್ಕೂ ಅಧಿಕ ಜನ ನೌಕರರು ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಅವರನ್ನು ಇದ್ದಕ್ಕಿದ್ದಂತೆ ಮೂರು ವರ್ಷಗಳ ಹಿಂದೆ ತೆಗೆದು ಹಾಕಲಾಗಿದ್ದು. ನೌಕರರು ಬೀದಿಗೆ ಬಿದ್ದಿದ್ದಲ್ಲದೇ ಕೈಗೆ ಕೆಲಸವಿಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದಲೂ ಕೆಲಸ ಮಾಡಿದ್ದು ಈಗ ಕಾಂಗ್ರೆಸ್ ಮುಖಂಡನೊಬ್ಬರಿಗೆ ಹೊರಗುತ್ತಿಗೆ ನೀಡಿರೋದ್ರಿಂದ ಅವರು ನಮ್ಮನ್ನು ಕೆಲಸದಿಂದ ತೆಗೆದು ಹಾಕಿ ಬೇರೆಯವರನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ಅದೇ ಕೆಲಸವನ್ನು ನಂಬಿಕೊಂಡು ಬದುಕು ಸಾಗಿಸುತ್ತಿದ್ದ ನಮ್ಮ ಕುಟುಂಬಗಳು ಬೀದಿಗೆ ಬಿದ್ದಿವೆ ಎನ್ನುವ ಆರೋಪ ನೌಕರರದ್ದಾಗಿದೆ. ಕಳೆದ ಮೂರು ವರ್ಷಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ 40ಕ್ಕೂ ಹೆಚ್ಚು ಜನರು ಸ್ವೀಪರ್, ಸ್ವಚ್ಛತೆ ವಿಭಾಗ ಸೇರಿದಂತೆ ಇತರೆ ಕೆಲಸ ಮಾಡುತ್ತಿದ್ದರು.

600 ರೂ. ವೇತನದಿಂದಲೂ ದುಡಿಯುತ್ತಿದ್ದು, ಈಗ 3 ವರ್ಷಗಳ ಹಿಂದೆ ತೆಗೆದು ಹಾಕಲಾಗಿದ್ದು ಮೂರು ವರ್ಷಗಳಿಂದಲೂ ನಿರಂತರ ಹೋರಾಟ ಮಾಡುತ್ತಿದ್ದರೂ ಅವರ ಸಮಸ್ಯೆಗೆ ಯಾರೊಬ್ಬ ಅಧಿಕಾರಿಯೂ ಸ್ಪಂದಿಸಿಲ್ಲ. ಹೀಗಾಗಿ ಮತ್ತೊಮ್ಮೆ ಬೀದಿಗಿಳಿದ ನೌಕರರು ಜಿಲ್ಲಾಸ್ಪತ್ರೆ ವೀಕ್ಷಣೆಗೆ ಆಗಮಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಅವರ ಎದುರು ತಮ್ಮ ಅಳಲು ತೋಡಿಕೊಂಡು ಮನವಿ ಸಲ್ಲಿಸಿದರು.ಅವರ ಮನವಿಗೆ ಸ್ಪಂದಿಸಿದ ಸಚಿವರು ತಮ್ಮ ಸಮಸ್ಯೆಗೆ ಪರಿಹಾರ ಸೂಚಿಸಲಾಗುವುದಾಗಿ ಭರವಸೆ ನೀಡಿದರು.

For All Latest Updates

TAGGED:

Kalburgi

ABOUT THE AUTHOR

...view details