ಕಲಬುರಗಿ : ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಹಮ್ಮಿಕೊಂಡ ಸಮಾರಂಭದಿಂದ ಕಾಂಗ್ರೆಸ್ ಹಿರಿಯ ಶಾಸಕ ಎಮ್ ವೈ ಪಾಟೀಲ್ ತಮಗೆ ಗೌರವ ಸಿಕ್ಕಿಲ್ಲ ಎಂದು ಮುನಿಸಿಕೊಂಡು ಸಮಾರಂಭದಿಂದ ಹೊರ ನಡೆದಿದ್ದಾರೆ.
ಕಲಬುರಗಿಯಲ್ಲಿ ಸಿಎಂ ಕಾರ್ಯಕ್ರಮದಿಂದ ಹೊರನಡೆದ ಕೈ ಹಿರಿಯ ಶಾಸಕ ಎಮ್ ವೈ ಪಾಟೀಲ್ - ಕಲಬುರಗಿಯಲ್ಲಿ sಇಎಂ ಸಮಾರಂಭದಿಂದ ಹೊರನಡೆದ ಹಿರಿಯ ಕಾಂಗ್ರೆಸ್ ಶಾಸಕ ಪಾಟೀಲ್
ಇದು ಸರ್ಕಾರಿ ಸಮಾರಂಭವಲ್ಲ. ಇದು ಬಿಜೆಪಿ ಸಮಾರಂಭದಂತೆ ಕಂಡು ಬರುತ್ತಿದೆ. ವೇದಿಕೆ ಮೇಲೆ ಬಿಜೆಪಿಯ ಪ್ರತಿಯೊಬ್ಬರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಆದರೆ, ಹಿರಿಯ ಶಾಸಕರು ಎನ್ನುವುದನ್ನು ಮರೆತು ಶಿಷ್ಠಾಚಾರ ಉಲ್ಲಂಘಿಸಿ, ನಮಗೆ ವೇದಿಕೆ ಮುಂಭಾಗದ ಕೆಳಗೆ ಆಸನದ ವ್ಯವಸ್ಥೆ ಮಾಡಲಾಗಿದೆ..
ಇದು ಸರ್ಕಾರಿ ಸಮಾರಂಭವಲ್ಲ. ಇದು ಬಿಜೆಪಿ ಸಮಾರಂಭದಂತೆ ಕಂಡು ಬರುತ್ತಿದೆ. ವೇದಿಕೆ ಮೇಲೆ ಬಿಜೆಪಿಯ ಪ್ರತಿಯೊಬ್ಬರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಆದರೆ, ಹಿರಿಯ ಶಾಸಕರು ಎನ್ನುವುದನ್ನು ಮರೆತು ಶಿಷ್ಠಾಚಾರ ಉಲ್ಲಂಘಿಸಿ, ನಮಗೆ ವೇದಿಕೆ ಮುಂಭಾಗದ ಕೆಳಗೆ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಅಸಮಾಧಾನಗೊಂಡು ಸಮಾರಂಭದ ಆರಂಭದಲ್ಲಿಯೇ ಶಾಸಕ ಪಾಟೀಲ್ ಹೊರ ನಡೆದರು.
ಮಹಾನಗರ ಪಾಲಿಕೆಯ ಕಸ ವಿಲೇವಾರಿ ವಾಹನ ಬಿಡುಗಡೆ, ನೂತನ ತರಕಾರಿ ಮಾರುಕಟ್ಟೆ ಶಂಕು ಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆಗೆ ಕಣ್ಣಿ ಮಾರುಕಟ್ಟೆ ಬಳಿ ಸಮಾರಂಭ ಹಮ್ಮಿಕೊಳ್ಳಲಾಗಿದೆ.
TAGGED:
CM Yeddyurappa in Kalaburgi