ಕರ್ನಾಟಕ

karnataka

ETV Bharat / state

ಕಲಬುರಗಿ: ಹಿಟ್​ ಅಂಡ್​​ ರನ್​​: ಕಾಂಗ್ರೆಸ್​ ವಿಧಾನ ಪರಿಷತ್ ಸದಸ್ಯನ ತಾಯಿ ಸಾವು - Legislative Council member mother died

Legislative Council member mother died in an accident: ಕಾಂಗ್ರೆಸ್​ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರ ತಾಯಿ ಸುಮಿತ್ರಾಬಾಯಿ ಶಾಮರಾವ್​ ಅರಳಿ ಅವರು ರಸ್ತೆ ದಾಟುವಾಗ ಅಪರಿಚಿತ ಬೈಕ್​​ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

Sumitrabai Shamarao bloom
ಮೃತರು- ಸುಮಿತ್ರಾಬಾಯಿ ಶಾಮರಾವ ಅರಳಿ

By ETV Bharat Karnataka Team

Published : Dec 15, 2023, 6:55 AM IST

ಕಲಬುರಗಿ: ರಸ್ತೆ ದಾಟುವಾಗ ಬೈಕ್​​ ಡಿಕ್ಕಿ ಹೊಡೆದ ಪರಿಣಾಮ ಕಾಂಗ್ರೆಸ್​ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರ ತಾಯಿ ಮೃತಪಟ್ಟಿದ್ದಾರೆ. ಅಪಘಾತ ಎಸೆಗಿರುವ ವ್ಯಕ್ತಿ ಬೈಕ್​ ಸಮೇತ ಪರಾರಿಯಾಗಿದ್ದಾನೆ. ಈ ಘಟನೆ ಸೇಡಂ ರಸ್ತೆಯ ಟೊಯೋಟಾ ಶೋರೂಂ ಹತ್ತಿರ ಗುರುವಾರ ನಡೆದಿದೆ. ಬೀದರ್ ಜಿಲ್ಲೆ ಹಳ್ಳಿಖೇಡ (ಬಿ) ಗ್ರಾಮದವರಾದ ಸುಮಿತ್ರಾಬಾಯಿ ಶಾಮರಾವ್​ ಅರಳಿ (75) ಮೃತಪಟ್ಟವರು.

ಬೈಕ್ ಗುದ್ದಿದ ರಭಸಕ್ಕೆ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸುಮಿತ್ರಾಬಾಯಿ ಅರಳಿ ಅವರು ಕಲಬುರಗಿ ನಗರದ ಬಡೇಪುರ ಕಾಲೋನಿಯಲ್ಲಿರುವ ಮಗಳು ಶೀಲಾದೇವಿ ಅರಸ ಅವರ ಮನೆಗೆ ಬಂದಿದ್ದರು. ಅಪಘಾತ ಎಸಗಿರುವ ಆರೋಪಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಿದ್ದ ಪುತ್ರ, ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರು ತಾಯಿ ವಿಷಯ ತಿಳಿಯುತ್ತಿದ್ದಂತೆಯೇ ಕಲಬುರಗಿಗೆ ದೌಡಾಯಿಸಿದ್ದಾರೆ. ಹಾಗೆಯೇ ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ. ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸುಮಿತ್ರಬಾಯಿ ಅರಳಿ ಅವರ ನಿಧನಕ್ಕೆ ರಾಜಕೀಯ ಗಣ್ಯರು, ಮಠಾಧೀಶರು ಸೇರಿದಂತೆ ಮತ್ತಿತರರು ಶೋಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಸಿಗರೇಟ್ ಸೇಲ್ಸ್ ಮ್ಯಾನ್​ಗಳನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದ ಐವರ ಬಂಧನ

ಬ್ಲೇಡ್ ತೋರಿ ಮಹಿಳೆ ಕೊರಳಲ್ಲಿನ ಚಿನ್ನದ ಸರ ಸುಲಿಗೆ ಮಾಡಿದ ಖದೀಮರು( ಕಲಬುರಗಿ):ಮಗನೊಂದಿಗೆ ಆಟೋದಲ್ಲಿ ಮನೆಗೆ ಹೋಗುತ್ತಿದ್ದ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಬ್ಲೇಡ್ ತೋರಿಸಿ ಜೀವ ಬೆದರಿಕೆ ಹಾಕಿ ಅವರ ಕೊರಳಲ್ಲಿದ್ದ 90 ಸಾವಿರ ರೂ. ಮೌಲ್ಯದ ತಾಳಿಸರ ಮತ್ತು ಅವರ ಮಗನ ಬಳಿಯಿದ್ದ 700 ರೂ. ನಗದು ಸುಲಿಗೆ ಮಾಡಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.

ಸೇಡಂ ರಸ್ತೆಯ ಎನ್‍ಜಿಓ ಕಾಲೋನಿಯ ಪ್ರಿಯಾಂಕಾ ಲೋಕಾಂಡೆ ಮತ್ತು ಅವರ ಮಗ ಅಕ್ಷಯ ಲೋಕಾಂಡೆ (16) ಅವರು ಮನೆಗೆ ಸಾಮಗ್ರಿ ತರಲೆಂದು ಸೂಪರ್ ಮಾರ್ಕೆಟ್‍ಗೆ ಹೋಗಿದ್ದಾರೆ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ಸಿಟಿ ಸೆಂಟರ್​ ಮಾಲ್ ಹತ್ತಿರ ಆಟೋ ಹತ್ತಿಕೊಂಡು ಓಂನಗರ ಗೇಟ್ ಹತ್ತಿರ ಬಿಡುವಂತೆ ಹೇಳಿದ್ದಾರೆ. ಈ ಮಧ್ಯೆ ಎಂ.ಆರ್.ಎಂ.ಸಿ.ಮೆಡಿಕಲ್ ಕಾಲೇಜು ಹತ್ತಿರ ಅಪರಿಚಿತ ವ್ಯಕ್ತಿಯೊಬ್ಬ ಕೈ ಮಾಡಿ ಆಟೋ ನಿಲ್ಲಿಸಿ ಓಲ್ಡ್ ಆರ್​ಟಿಒ ಕ್ರಾಸ್ ಹತ್ತಿರ ಇಳಿಯುವುದಾಗಿ ಹೇಳಿ ಜಬರದಸ್ತಿನಿಂದ ಆಟೋದಲ್ಲಿ ಹತ್ತಿ ಕುಳಿತಿದ್ದಾನೆ.

ಬಳಿಕ ಮಹೇಂದ್ರ ಶೋರೂಂ ಹತ್ತಿರ ಗಲ್ಲಿಯಲ್ಲಿ ಹೋಗುವ ರಸ್ತೆಯಲ್ಲಿ ಆಟೋ ನಿಲ್ಲಿಸಿ ಬ್ಲೇಡ್ ತೆಗೆದು ಜೀವ ಬೆದರಿಕೆ ಹಾಕಿ ಅಕ್ಷಯ ಲೋಕಾಂಡೆ ಬಳಿ ಇದ್ದ 700 ರೂ.ನಗದು ಮತ್ತು ಪ್ರಿಯಾಂಕಾ ಲೋಕಾಂಡೆ ಅವರ ಕೊರಳಲ್ಲಿದ್ದ 90 ಸಾವಿರ ರೂ.ಮೌಲ್ಯದ 20 ಗ್ರಾಂ.ತಾಳಿಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ABOUT THE AUTHOR

...view details