ಕರ್ನಾಟಕ

karnataka

ETV Bharat / state

ಚಿಂಚನಸೂರ್ ಖರ್ಗೆ ಬಗ್ಗೆ ಹಗುರವಾಗಿ ಮಾತನಾಡುವುದು ಖಂಡನೀಯ: ತಿಪ್ಪಣಪ್ಪ - ಬಾಬುರಾವ್ ಚಿಂಚನಸೂರು

ಕೋಲಿ ಸಮಾಜವನ್ನು ಎಸ್​ಟಿಗೆ ಸೇರಿಸಲು ಸಿದ್ದರಾಮಯ್ಯ ಅವರು ಎರಡು ಬಾರಿ ಕೇಂದ್ರಕ್ಕೆ ಶಿಪಾರಸ್ಸು ಮಾಡಿದರು. ಆದರೆ ಬಿಜೆಪಿ ಸರಕಾರ ಅದನ್ನು ತಿರಸ್ಕರಿಸಿದೆ ಎಂಬುದು ಚಿಂಚನಸೂರ್ ತಿಳಿಯಲಿ ಎಂದರು.

ಕಾಂಗ್ರೆಸ್ ಮುಖಂಡ ತಿಪ್ಪಣಪ್ಪ ಕಮಕನೂರ

By

Published : May 18, 2019, 4:49 AM IST

ಕಲಬುರಗಿ: ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಷಯದ ಕುರಿತು ‌ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದನ್ನು ಕಾಂಗ್ರೆಸ್ ಮುಖಂಡ ತಿಪ್ಪಣಪ್ಪ ಕಮಕನೂರ ತೀವ್ರವಾಗಿ ಖಂಡಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ‌ ಮಾತನಾಡಿದ ಅವರು‌, ಚಿಂಚನಸೂರ್ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಅಧಿಕಾರಿವನ್ನು ಅನುಭವಿಸಿ ಈಗ ಬಿಜೆಪಿಗೆ ಹೋಗಿ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಸುಳ್ಳು ಆರೋಪ ಮಾಡುವುದಲ್ಲದೆ ಅವರ ಬಗ್ಗೆ ಹಗುರವಾಗಿ‌ ಮಾತನಾಡುತ್ತಿದ್ದಾರೆ. ಇಂದು ಖಂಡನೀಯ. ಒಂದು ಕಾಲದಲ್ಲಿ ಖರ್ಗೆ ಅವರ ಬಗ್ಗೆ ಹೊಗಳುತ್ತಿದ್ದ ಬಾಬುರಾವ್ ಈಗ ಅವರ ಬಗ್ಗೆ ಹಗುರವಾಗಿ‌ ಮಾತನಾಡುತ್ತಿದ್ದಾನೆ ಎಂದು ಟೀಕಿಸಿದರು.

ಕಾಂಗ್ರೆಸ್ ಮುಖಂಡ ತಿಪ್ಪಣಪ್ಪ ಕಮಕನೂರ

ಕೋಲಿ ಸಮಾಜವನ್ನು ಎಸ್​ಟಿಗೆ ಸೇರಿಸಲು ಸಿದ್ದರಾಮಯ್ಯ ಅವರು ಎರಡು ಬಾರಿ ಕೇಂದ್ರಕ್ಕೆ ಶಿಪಾರಸ್ಸು ಮಾಡಿದರು. ಆದರೆ ಬಿಜೆಪಿ ಸರ್ಕಾರ ಅದನ್ನು ತಿರಸ್ಕರಿಸಿದೆ ಎಂಬುದು ಚಿಂಚನಸೂರ್ ತಿಳಿಯಲಿ ಎಂದರು.

ಕೋಲಿ ಸಮಾಜಕ್ಕೆ ವಿಠಲ್ ಹೇರೊರ ಕೊಡುಗೆ ಅಪಾರವಾಗಿದೆ‌. ಅವರ ಹೆಸರು ಹೇಳುತ್ತಿರುವ ಚಿಂಚನಸೂರ್ ಅವರನ್ನು ಹೇರೂರು ನಂಬುತ್ತಿರಲ್ಲಿಲ್ಲ. ಚಿಂಚನಸೂರ್ ಗುಣವನ್ನು ಚನ್ನಾಗಿ ಅರಿತಿದ್ದ ವಿಠಲ್ ಹೇರೊರ ತಮ್ಮ ಜೀವಿತಾವಧಿಯಲ್ಲಿ ಯಾವತ್ತು ಚಿಂಚನಸೂರ್​ನೊಂದಿಗೆ ವೇದಿಕೆ ಹಂಚಿಕೊಂಡಿಲ್ಲ ಎಂದರು.

ABOUT THE AUTHOR

...view details