ಕಲಬುರಗಿ:ಕಾಂಗ್ರೆಸ್‌ಗೆ ಈ ಬಾರಿ ಅಧಿಕಾರ ಕೊಟ್ಟು ನೋಡಿ ಎಂಬ ಆ ಪಕ್ಷದ ನಾಯಕರ ಹೇಳಿಕೆಗೆ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಐಸಿಯುನಲ್ಲಿ ಇದ್ದವರಿಗೆ ಇಂಜೆಕ್ಷನ್ ಕೊಟ್ಟರೆ ಬದುಕಬಹುದು. ಆದರೆ ಕಾಂಗ್ರೆಸ್ ಸಂಪೂರ್ಣ ಸತ್ತೋಗಿರುವ ಪಕ್ಷ. ಇದಕ್ಕೆ ಇಂಜೆಕ್ಷನ್ ಕೊಟ್ಟು ಜೀವಂತ ಮಾಡಿದರೆ ಭೂಮಂಡಲವನ್ನೇ ಸ್ವರ್ಗ ಮಾಡುತ್ತೇವೆ ಎಂಬಂತಿದೆ ಕಾಂಗ್ರೆಸ್ ನಾಯಕ ಮಾತು ಎಂದು ಅವರು ಕುಟುಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನ ಸೋಲಿಸಿದರು. ಆ ಸ್ಥಾನದಿಂದಲೇ ಕಿತ್ತೊಗೆದರು. ಅನೇಕ ಸಚಿವರುಗಳು ಸೋಲು ಅನುಭವಿಸಿದರು. ಆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ ಎಂದರು.