ಕಲಬುರಗಿ:ಜಾತಿಗಳನ್ನು ಒಡೆದಾಳುವ ಸಂಸ್ಕೃತಿ ಉಮೇಶ್ ಜಾಧವ್ ರೂಢಿಸಿಕೊಂಡಿದ್ದು, ಅನ್ನ ಕೊಟ್ಟ ತಟ್ಟೆಯನ್ನು ಒದ್ದು ಈಗ ಮತ್ತೆ ಅನ್ನ ಕೇಳಲು ತಟ್ಟೆ ಹಿಡಿದು ಬಂದಿದ್ದಾರೆ ಎಂದು ಜಾಧವ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಟೀಕಿಸಿದ್ದಾರೆ.
ಮತದ ತಟ್ಟೆ ಒದ್ದು ಹೋದವರಿಗೆ ತಕ್ಕ ಪಾಠ ಕಲಿಸಿ: ಜಾಧವ್ ವಿರುದ್ಧ ರಾಥೋಡ್ ವಾಗ್ದಾಳಿ - undefined
ಚಿಂಚೋಳಿ ಉಪ ಚುನಾವಣೆ ಹಿನ್ನೆಲೆಯಲ್ಲಿ ರೇವಗಿ ಸೇರಿದಂತೆ ಹಲವಡೆ ಪ್ರಚಾರ ಕಾರ್ಯ ಕೈಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಜಾಧವ್ ವಿರುದ್ಧ ಹರಿಹಾಯ್ದಿದ್ದಾರೆ.
ಚಿಂಚೋಳಿ ಉಪ ಚುನಾವಣೆ ಹಿನ್ನೆಲೆಯಲ್ಲಿ ರೇವಗಿ ಸೇರಿದಂತೆ ಹಲವಡೆ ಪ್ರಚಾರ ಕಾರ್ಯ ಕೈಗೊಂಡಿದ್ದು, ಈ ವೇಳೆ ಮಾತನಾಡಿದ ಅವರು ಜಾಧವ್ ಜಾತಿ ಜಾತಿ ನಡುವೆ ಜಗಳ ಹಚ್ಚುತ್ತಿದ್ದಾರೆ. ಕಳೆದ ಬಸವ ಜಯಂತಿಯಲ್ಲಿ ಲಿಂಗಾಯತರು ತಮಗೆ ಮತವನ್ನೆ ಹಾಕಿಲ್ಲ ಎಂದು ನೇರ ನೇರವಾಗಿ ಲಿಂಗಾಯತರನ್ನು ತೆಗಳಿದ್ದರು. ಈಗ ಬಿಜೆಪಿ ಸೇರಿ ಅದೆ ಲಿಂಗಾಯತರನ್ನು ಓಲೈಸಲು ಇಲ್ಲದ ಪ್ರಯತ್ನ ಪಡುತ್ತಿದ್ದಾರೆ. ಬಂಜಾರ ಸಮುದಾಯ ಒಂದರಿಂದಲೇ ಲೀಡರ್ ಆಗಲು ಸಾದ್ಯವಿಲ್ಲ. ಎಲ್ಲ ಜಾತಿ ಜನಾಂಗವನ್ನು ಒಗ್ಗೂಡಿಸಿಕೊಂಡು ಹೋಗಬೇಕು. ಆದರೆ ಜಾಧವ್ ತೊರಿದ ದುರಹಂಕಾರದ ವರ್ತನೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟೀಕಿಸಿದ್ರು.
ಜಾಧವ್ ತಮ್ಮ ಸ್ವಂತ ಸಹೋದರನಿಗೂ ವಂಚಿಸಿದ್ದಾರೆ. ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್ಗೆ ಬಿಜೆಪಿ ಟಿಕೆಟ್ ನೀಡುವ ನಿರ್ಧಾರ ಮಾಡಿತ್ತು. ಬೆಂಗಳೂರಿನಲ್ಲಿ ಎರಡು ದಿನ ಬಿಡು ಬಿಟ್ಟು ತಮ್ಮ ಮಗನಿಗೆ ಟಿಕೆಟ್ ಕೊಡಿಸಿ ಸ್ವಂತ ಸಹೋದರನಿಗೆ ಅನ್ಯಾಯ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಅನ್ನದ ತಟ್ಟೆ ಕೊಟ್ಟರೆ ದುರಂಹಂಕಾರದಿಂದ ಒದ್ದು ಹೋಗಿದ್ದಾರೆ. ಅಂತವರಿಗೆ ದೇವರು ಕ್ಷಮಿಸಲ್ಲ. ಈಗ ಮತ್ತೆ ನಿಮ್ಮ ಮುಂದೆ ಮತ ಕೆಳಲು ಬರುತ್ತಿದ್ದಾರೆ. ಅವರಿಗೆ ನೀವೆ ತಕ್ಕ ಉತ್ತರ ಕೊಡಿ ಎಂದು ಜನರಲ್ಲಿ ಮನವಿ ಮಾಡಿದರು.