ಕರ್ನಾಟಕ

karnataka

ETV Bharat / state

ಕಲಬುರಗಿ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸ ಇದೆ : ಮಾಜಿ ಸಚಿವ ಬೆಳಮಗಿ - ETv Bharat Kannada news

ಕಾಂಗ್ರೆಸ್ ಪಕ್ಷದಿಂದ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವ ವಿಶ್ವಾಸ ಇದೆ ಎಂದು ಬೆಳಮಗಿ ಹೇಳಿದರು.

Former minister Revunayaka Belamagi
ಮಾಜಿ ಸಚಿವ ರೇವೂನಾಯಕ ಬೆಳಮಗಿ

By

Published : Dec 22, 2022, 8:46 PM IST

ಕಲಬುರಗಿ:ಗ್ರಾಮೀಣ ಮತಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಭರವಸೆ ಇದೆ ಎಂದು ಮಾಜಿ ಸಚಿವ ರೇವೂನಾಯಕ ಬೆಳಮಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಂದಿಗೆ ಸಂಪರ್ಕ ಮಾಡಿಯೇ ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಅಲ್ಲದೆ ಇದು ನನ್ನ ಕೊನೆಯ ಚುನಾವಣೆ ಹೀಗಾಗಿ ಹೈಕಮಾಂಡ ನನಗೆ ಟಿಕೆಟ್ ನೀಡಬಹುದು ಎಂಬ ವಿಶ್ವಾಸ ಇದೆ ಎಂದರು.

ಕಳೆದ ಬಾರಿ ನನಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ, ನನ್ನ ಗೆಲುವು ಆಗಿದ್ದರೆ ಮತ್ತೊಮ್ಮೆ ನಾನೇ ಮಂತ್ರಿಯಾಗಬಹುದು ಅಂತ ಜಿಲ್ಲೆಯ ಕೆಲ ಬಿಜೆಪಿ ಮುಖಂಡರು ಯಡಿಯೂರಪ್ಪ ಅವರಿಗೆ ಹೇಳಿ ಟಿಕೆಟ್ ಸಿಗದಂತೆ ನೋಡಿಕೊಂಡಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರಿಗೂ ನನ್ನ ಮೇಲೆ ವಿಶ್ವಾಸ ಇದೆ. ಹೀಗಾಗಿ ಟಿಕೆಟ್ ನನಗೆ ಸಿಗಬಹುದು ಎಂಬ ಭರವಸೆ ಇದೆ ಎಂದು ಹೇಳಿದರು.

ಇದನ್ನೂ ಓದಿ :ಚಾಮರಾಜ ಕ್ಷೇತ್ರದಿಂದ ಹರೀಶ್ ಗೌಡರಿಗೆ ಟಿಕೆಟ್ ಫಿಕ್ಸ್​: ಜಮೀರ್ ಅಹಮ್ಮದ್

ABOUT THE AUTHOR

...view details