ಕರ್ನಾಟಕ

karnataka

ರಾಜಸ್ಥಾನದ ಟೈಲರ್ ಹತ್ಯೆಗೆ ಖಂಡನೆ: ಕಲಬುರಗಿಯಲ್ಲಿ ಪ್ರತಿಭಟನೆ

By

Published : Jun 30, 2022, 6:57 PM IST

ಕನ್ಹಯ್ಯ ಲಾಲ್ ಶಿರಚ್ಛೇದ ಖಂಡಿಸಿ ಕಲಬುರಗಿಯಲ್ಲಿ ಹಂತಕರ ಪ್ರತಿಕೃತಿಯನ್ನು ನೇಣಿಗೇರಿಸಿ, ಹಿಂದು ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು.

Condemnation for the murder of tailer in Rajasthan
ಕಲಬುರಗಿಯಲ್ಲಿ ಪ್ರತಿಭಟನೆ

ಕಲಬುರಗಿ:ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ಹಯ್ಯ ಲಾಲ್ ಶಿರಚ್ಛೇದ ಪ್ರಕರಣವನ್ನು ಖಂಡಿಸಿ ನಗರದಲ್ಲಿ ಹಂತಕರ ಪ್ರತಿಕೃತಿಯನ್ನು ನೇಣಿಗೇರಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಗರದ ಎಸ್​ವಿಪಿ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಟೈಲರ್ ಹತ್ಯೆ ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ

ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್​ ಹಾಕಿದ್ದಕ್ಕೆ ಟೈಲರ್​ನನ್ನು ಪಾಪಿಗಳು ಶಿರಚ್ಛೇದ ಮಾಡಿದ್ದಲ್ಲದೆ, ನಾವೇ ಕೊಂದಿದ್ದು ಎಂದು ವಿಡಿಯೋ ಬೇರೆ ಹರಿಬಿಟ್ಟಿದ್ದರು. ಇದು ನಿಜಕ್ಕೂ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ‌ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದರು. ಕೂಡಲೇ ಕೊಲೆಗಡುಕರನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದರು.‌

ರಾಜಸ್ಥಾನ ಸರ್ಕಾರದ ವಿರುದ್ಧ ಆರೋಪ: ನಗರದ ಎಸ್​ಪಿ ವೃತ್ತ, ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದ ಹಿಂದು ಜಾಗೃತಿ ಸೇನೆ, ಶಿವಾಜಿ ಬ್ರಿಗೇಡ್ ಹಾಗೂ ವಿವಿಧ ಹಿಂದು ಪರ‌ ಸಂಘಟನೆಯ ಕಾರ್ಯಕರ್ತರು, ಈ ಘಟನೆಗೆ ರಾಜಸ್ಥಾನ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:25 ವರ್ಷದ ಹಿಂದೆ ಕೊಲೆ ಮಾಡಿ ಪರಾರಿ: ಕಲಬುರಗಿಯಲ್ಲಿ ಸುಪಾರಿ ಕಿಲ್ಲರ್​ ಕೊನೆಗೂ ಅಂದರ್​

ABOUT THE AUTHOR

...view details