ಕರ್ನಾಟಕ

karnataka

ETV Bharat / state

ಮೂರು ದಿನ ಕಲಬುರಗಿಯಲ್ಲಿ ಸಂಪೂರ್ಣ ಲಾಕ್​ಡೌನ್: ಎಣ್ಣೆಗಾಗಿ ಲೈನ್​​ ಹಚ್ಚಿದ ಮದ್ಯಪ್ರಿಯರು

ಲಿಕ್ಕರ್ ಕೊಡ ಬಂದ್ ಮಾಡುವಂತೆ ಜಿಲ್ಲಾಡಳಿತ ಆದೇಶಿಸಿದ ಹಿನ್ನೆಲೆ ಮದ್ಯಪ್ರಿಯರು ಮದ್ಯದಂಗಡಿಗಳ ಮುಂದೆ ಸರತಿ‌ ಸಾಲಿನಲ್ಲಿ ನಿಂತು ಮದ್ಯ ಖರೀದಿಯಲ್ಲಿ ತೊಡಗಿದ್ದಾರೆ. ನಗರದ ಟಾನಿಕ್ ವೈನ್ ಶಾಪ್ ಸೇರಿದಂತೆ ಹಲವೆಡೆ ಬಾರ್ ಗಳ ಮುಂದೆ ಎಣ್ಣೆಗಾಗಿ ಮದ್ಯಪ್ರಿಯರು ಸರತಿ‌ಸಾಲಿನಲ್ಲಿ ನಿಂತಿದ್ದಾರೆ.

complete-lockdown-three-day-in-kalaburagi-news
ಮೂರು ದಿನ ಕಲಬುರಗಿಯಲ್ಲಿ ಸಂಪೂರ್ಣ ಲಾಕ್​ಡೌನ್

By

Published : May 19, 2021, 5:22 PM IST

ಕಲಬುರಗಿ:ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ನಾಳೆಯಿಂದ ಮೂರು ದಿನಗಳ ಕಾಲ ಕಲಬುರಗಿಯಲ್ಲಿ ಸಂಪೂರ್ಣ ಲಾಕ್​ಡೌನ್ ಜಾರಿಗೊಳಿಸಿದ್ದು. ಮೆಡಿಕಲ್, ಆಸ್ಪತ್ರೆ, ಹೋಟೆಲ್ ಪಾರ್ಸಲ್ ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳನ್ನು ಬಂದ್ ಮಾಡುವಂತೆ ಡಿಸಿ ಆದೇಶಿಸಿದ್ದಾರೆ.

ಮೂರು ದಿನ ಕಲಬುರಗಿಯಲ್ಲಿ ಸಂಪೂರ್ಣ ಲಾಕ್​ಡೌನ್

ಓದಿ: ಕೊರೊನಾಗೆ ಕಲಬುರಗಿ ಚೌಕ್​ ಠಾಣೆಯ ಎಎಸ್ಐ ಮಲ್ಲಿಕಾರ್ಜುನ ಪಂಚಕಟ್ಟಿ ಬಲಿ

ಲಿಕ್ಕರ್ ಕೂಡ ಬಂದ್ ಮಾಡುವಂತೆ ಜಿಲ್ಲಾಡಳಿತ ಆದೇಶಿಸಿದ ಹಿನ್ನೆಲೆ ಮದ್ಯಪ್ರಿಯರು ಮದ್ಯದಂಗಡಿಗಳ ಮುಂದೆ ಸರತಿ‌ ಸಾಲಿನಲ್ಲಿ ನಿಂತು ಮದ್ಯ ಖರೀದಿಯಲ್ಲಿ ತೊಡಗಿದ್ದಾರೆ. ನಗರದ ಟಾನಿಕ್ ವೈನ್ ಶಾಪ್ ಸೇರಿದಂತೆ ಹಲವೆಡೆ ಬಾರ್ ಗಳ ಮುಂದೆ ಎಣ್ಣೆಗಾಗಿ ಮದ್ಯಪ್ರಿಯರು ಸರತಿ‌ಸಾಲಿನಲ್ಲಿ ನಿಂತಿದ್ದಾರೆ.

ನಾಳೆಯಿಂದ ಕಂಪ್ಲೀಟ್ ಲಾಕ್​ಡೌನ್ ಇರುವುದರಿಂದ ಇಂದು ಮದ್ಯ ಖರೀದಿಸುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಅಗತ್ಯ ಸೇವೆ ಹೊರತುಪಡಿಸಿ ಹೋಟೆಲ್‌, ಮದ್ಯದಂಗಡಿಗಳಲ್ಲಿ ಪಾರ್ಸೆಲ್‌ ಸೇವೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಜಿಲ್ಲೆಯ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನ ಅನಗತ್ಯವಾಗಿ ರಸ್ತೆ ಮೇಲೆ ಓಡಾಡುತ್ತಿದ್ದಾರೆ. ಹೀಗಾಗಿ ಕಲಬುರಗಿಗೆ ಅಗತ್ಯ ವಸ್ತುಗಳಿಗೂ ಸಹ ಅವಕಾಶ ನೀಡಲಾಗುತ್ತಿಲ್ಲ.

ABOUT THE AUTHOR

...view details