ಕರ್ನಾಟಕ

karnataka

ETV Bharat / state

ಅನ್ಯ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆ; ಕೊಂಚೂರು ಶ್ರೀಧರಾನಂದ ಸ್ವಾಮೀಜಿ ವಿರುದ್ಧ ಪ್ರಕರಣ - ವಾಡಿ ಪೊಲೀಸ್ ಠಾಣೆ

ಕೊಂಚೂರಿನ ಶ್ರೀಧರಾನಂದ ಸ್ವಾಮೀಜಿಗಳು, ಕೊಂಚೂರು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಯಜ್ಞ ಕಾರ್ಯಕ್ರಮ ವೇಳೆ ಅನ್ಯ ಧರ್ಮದ ದೇವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಕೊಂಚೂರಿನ ಶ್ರೀಧರಾನಂದ ಸ್ವಾಮೀಜಿ

By

Published : Aug 23, 2019, 11:17 AM IST

ಕಲಬುರಗಿ: ಅನ್ಯ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಕೊಂಚೂರಿನ ಶ್ರೀಧರಾನಂದ ಸ್ವಾಮೀಜಿ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೂರಿನ ಪ್ರತಿ

ಸವಿತಾ ಸಮಾಜದ ಧರ್ಮಗುರುಗಳಾದ ಚಿತ್ತಾಪುರ ತಾಲೂಕು ಕೊಂಚೂರಿನ ಶ್ರೀಧರಾನಂದ ಸ್ವಾಮೀಜಿಗಳು, ಆಗಸ್ಟ್‌ 17 ರಂದು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಯಜ್ಞ ಕಾರ್ಯಕ್ರಮದಲ್ಲಿ ಅನ್ಯ ಧರ್ಮದ ದೇವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಲ್ಲದೇ, ಪ್ರಚೋದನಾಕಾರಿ ಹೇಳಿಕೆ ನೀಡಿ ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿರುವ ಶ್ರೀಧರಾನಂದ ಸ್ವಾಮೀಜಿ ವಿರುದ್ಧ ಕಾನೂನು ಕಠಿಣ ಕ್ರಮಕೈಗೊಳ್ಳುವಂತೆ ಜವುರ್ ಖಾನ್ ಎಂಬುವವರು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details