ಕರ್ನಾಟಕ

karnataka

ETV Bharat / state

ಮಕ್ಕಳನ್ನು ಬೇಡುವವರನ್ನಾಗಿಸದೆ ಮಾಲೀಕರನ್ನಾಗಿಸಿ : ಬಸವರಾಜ ಪಾಟೀಲ ಕರೆ - sedam latest news

ಪಟ್ಟಣದ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿ ಕಲಬುರಗಿ, ಹೆಡ್ ಹೆಲ್ಡ್ ಹೈ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡ ಸಮುದಾಯ ಸಮೃದ್ಧಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಪಾಲ್ಗೊಂಡಿದ್ದರು.

basavaraj-patil
ಬಸವರಾಜ ಪಾಟೀಲ ಕರೆ

By

Published : Jun 15, 2020, 10:45 PM IST

ಸೇಡಂ :ಪಾಲಕರು ತಮ್ಮ ಮಕ್ಕಳನ್ನು ಬೇಡುವಂತಹ ಭಿಕಾರಿಗಳನ್ನಾಗಿಸದೆ, ಕೊಡುಗೈ ದಾನಿಯಾಗುವ ಮಾಲೀಕರನ್ನಾಗಿಸುವ ಕನಸು ಕಾಣಬೇಕು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಹೇಳಿದರು.

ಪಟ್ಟಣದ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿ ಕಲಬುರಗಿ, ಹೆಡ್ ಹೆಲ್ಡ್ ಹೈ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡ ಸಮುದಾಯ ಸಮೃದ್ಧಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿಯವರ ಕನಸಿನಂತೆ ಹಳ್ಳಿಗಳು ಸ್ವಾವಲಂಬಿಯಾಗಬೇಕು. ಕೊರೋನಾ ಹಿನ್ನೆಲೆಯಲ್ಲಿ ಕೋಟ್ಯಾಂತರ ಜನ ಹಳ್ಳಿಗಳತ್ತ ಹಿಂತಿರುಗಿದ್ದಾರೆ, ಅವರಲ್ಲಿರುವ ಕಲೆಗೆ ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ತಾವು ಹಿಂದುಳಿದವರು ಎಂಬ ಭಾವನೆ ತೊಲಗಿ, ಆತ್ಮಾಭಿಮಾನ, ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಗುರಿಯ ಜೊತೆಗೆ ಕಾಯಕ ಪ್ರಜ್ಞೆ ಮೈಗೂಡಿಸಿಕೊಂಡು ಸಾಗಬೇಕು. ಬೇಡುವ ಕೈಗಳಾಗದೆ ದುಡಿದು ತಿನ್ನುವ ಕೈಗಳಾಗಬೇಕು. ಬೇಡಿಕೊಂಡು ತಿನ್ನುವವರ ಜೀವನ ಎಂದಿಗೂ ಸಹ ಉದ್ಧಾರ ಆಗಲ್ಲ ಎಂದು ನುಡಿದರು.

ಬಸವರಾಜ ಪಾಟೀಲ ಕರೆ

ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಘೋಷಿಸಿದ ಆತ್ಮನಿರ್ಭರ ಭಾರತ ಪರಿಕಲ್ಪನೆಯನ್ನು ಹತ್ತಾರು ವರ್ಷಗಳ ಹಿಂದೆಯೇ ಮಾಜಿ ಸಂಸದರಾದ ಡಾ. ಬಸವರಾಜ ಪಾಟೀಲ ಸೇಡಂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಾರಗೊಳಿಸಿದ್ದಾರೆ. ದಾಸ್ಯದ ಸಂಕೇತವಾಗಿದ್ದ ಹೈದ್ರಾಬಾದ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ರಾಜ್ಯ ಸರ್ಕಾರ ಘೋಷಿಸುವ ಮುಂಚೆಯೇ ತಮ್ಮ ಕಾರ್ಯಗಳ ಮೂಲಕ ಕಲ್ಯಾಣ ಕರ್ನಾಟಕವಾಗಿಸಿದ್ದರು ಎಂದರು.

ABOUT THE AUTHOR

...view details