ಕಲಬುರಗಿ: ಲಿಕ್ವಿಡ್ ಸಿಮೆಂಟ್ ಟ್ಯಾಂಕರ್ ಮತ್ತು ಖಾಸಗಿ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಎರಡೂ ವಾಹನಗಳೂ ಸಹ ಪಲ್ಟಿಯಾಗಿವೆ. ಬಸ್‌ನಲ್ಲಿದ್ದ 24 ಪ್ರಯಾಣಿಕರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಹೊರವಲಯದ ಹುಮನಾಬಾದ್ ರಿಂಗ್ ರಸ್ತೆಯಲ್ಲಿ ನಡೆದಿದೆ.
ಬಸ್ -ಟ್ಯಾಂಕರ್ ನಡುವೆ ಡಿಕ್ಕಿ: 24 ಪ್ರಯಾಣಿಕರಿಗೆ ಗಾಯ, ಮೂವರ ಸ್ಥಿತಿ ಗಂಭೀರ - ಕಲಬುರಗಿಯಲ್ಲಿ ಬಸ್ -ಟ್ಯಾಂಕರ್ ನಡುವೆ ಡಿಕ್ಕಿ
ಹುಮನಬಾದ್ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಮತ್ತು ಖರ್ಗೆ ಸರ್ಕಲ್‌ನಿಂದ ಹುಮನಾಬಾದ್ ರಿಂಗ್ ರಸ್ತೆ ಕಡೆ ಬರುತ್ತಿದ್ದ ಟ್ಯಾಂಕರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಬಸ್ -ಟ್ಯಾಂಕರ್ ನಡುವೆ ಡಿಕ್ಕಿ
ಹುಮನಾಬಾದ್ ಕಡೆಯಿಂದ ಬರುತ್ತಿದ್ದ ಖಾಸಗಿ ಕಂಪನಿಯ ಬಸ್ ಮತ್ತು ಖರ್ಗೆ ಸರ್ಕಲ್‌ನಿಂದ ಹುಮನಾಬಾದ್ ರಿಂಗ್ ರಸ್ತೆ ಕಡೆ ಬರುತ್ತಿದ್ದ ಟ್ಯಾಂಕರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗ್ತಿದೆ. ಬೃಹತ್ ಕ್ರೈನ್ ಮೂಲಕ ಪಲ್ಟಿಯಾಗಿ ಬಿದ್ದಿದ್ದ ಎರಡೂ ವಾಹನಗಳನ್ನ ಮೇಲಕ್ಕೆತ್ತಲಾಗಿದೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಆಕ್ಷೇಪಾರ್ಹ ಪೋಸ್ಟ್ನಿಂದ ಹುಬ್ಬಳ್ಳಿ ಪ್ರಕ್ಷುಬ್ಧ.. ಪೊಲೀಸ್ ಠಾಣೆ ಮುಂದೆ ಕಲ್ಲು ತೂರಾಟ, ವಾಹನಗಳು ಜಖಂ
TAGGED:
kalburgi accident news