ಕಲಬುರಗಿ:ಸಿಎಂ ಬಸವರಾಜ ಬೊಮ್ಮಾಯಿ ಆಗಮನದ ಹಿನ್ನೆಲೆ ಸುಮಾರು ಒಂದು ಗಂಟೆ ಕಾಲ ಕಲಬುರಗಿ-ಸೇಡಂ ನಡುವಿನ ರಸ್ತೆ ಸಂಚಾರ ತಡೆದ ಪರಿಣಾಮ ಸಾರ್ವಜನಿಕರು ಪರದಾಟ ನಡೆಸಿದರು.
ವಿವೇಕ ಯೋಜನೆಯಡಿ ಶಾಲಾ ಕೊಠಡಿ ನಿರ್ಮಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಇಂದು ಜಿಲ್ಲೆಗೆ ಆಗಮಿಸಿದ್ದಾರೆ. ವಿಶೇಷ ವಿಮಾನದ ಮೂಲಕ ಸರಡಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ, ಇಲ್ಲಿಂದ ಸುಮಾರು 3 ಕಿ.ಮೀ ಅಂತದರಲ್ಲಿರುವ ಸೇಡಂ ರಸ್ತೆಯ ಮಾಡಿಯಾಳ ತಾಂಡಾಕ್ಕೆ ತೆರಳಿದರು.
ಹೆದ್ದಾರಿ ಪಕ್ಕದಲ್ಲಿರುವ ಮಾಡಿಯಾಳ ತಾಂಡಾದಲ್ಲಿ ಕಾರ್ಯಕ್ರಮ ಇರುವುದರಿಂದ ಸಿಎಂ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ ಸುಮಾರು 15 ನಿಮಿಷಗಳಿಂದ ಕಾರ್ಯಕ್ರಮ ಮುಗಿಯುವವರೆಗೆ ಸರಿಸುಮಾರು ಒಂದು ಗಂಟೆ ಕಾಲ ಸೇಡಂ ರಸ್ತೆಯ ಎರಡು ಕಡೆಯ ರಸ್ತೆ ಸಂಚಾರ ತಡೆ ಹಿಡಿಯಲಾಗಿತ್ತು.
ಸಿಎಂ ಆಗಮನದ ಹಿನ್ನೆಲೆ ರಸ್ತೆ ಸಂಚಾರ ತಡೆ ರಿಬ್ಬಿನಪಲ್ಲಿ ಹೆದ್ದಾರಿಯಾದ್ದರಿಂದ ಕಿಲೋ ಮೀಟರ್ ಉದ್ದದವರೆಗೆ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದವು. ದ್ವಿಚಕ್ರ ವಾಹನವನ್ನೂ ಬಿಡದ ಹಿನ್ನೆಲೆ ಸವಾರರು ಪರದಾಡಬೇಕಾಯಿತು. ತುರ್ತು ಕೆಲಸ ಇದೆ ನಿಮ್ಮ ಕಾಲು ಬಿಳುತ್ತೇವೆ ಎಂದು ಬೈಕ್ ಸವಾರನೋರ್ವ ಬೇಡಿಕೊಂಡರೂ ಸಹ ಪೊಲೀಸರ ಕಿವಿಗೊಡಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇನ್ನು, ಅಭಿವೃದ್ದಿ ಕಾರ್ಯಕ್ಕೆ ಸಿಎಂ ಜಿಲ್ಲೆಗೆ ಆಗಮಿಸಿದ್ದಕ್ಕೆ ಸ್ವಾಗತವಿದೆ. ಆದರೇ, ಸುರಕ್ಷತೆ ಹೆಸರಿನಲ್ಲಿ ಪ್ರಮುಖ ರಸ್ತೆಯ ವಾಹನ ಸಂಚಾರ ತಾಸುಗಟ್ಟಲೇ ತಡೆದರೆ ಜನರ ಪರಿಸ್ಥಿತಿ ಏನಾಗಬಾರದು. ತುರ್ತು ಕೆಲಸ ಇದ್ದವರು ಏನು ಮಾಡಬೇಕೆಂದು ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುವವನು ನಿಜವಾದ ನಾಯಕ: ಸಿದ್ದರಾಮಯ್ಯ