ಕರ್ನಾಟಕ

karnataka

ETV Bharat / state

ಸಂಪುಟ ವಿಸ್ತರಣೆ ಖಚಿತ... ಯಾರನ್ನ ಸೇರಿಸಬೇಕು ಅನ್ನೋದನ್ನ ಹೈಕಮಾಂಡ್ ನಿರ್ಧರಿಸುತ್ತೆ; ಬಿಎಸ್​ವೈ - ಕಲಬುರಗಿ ಸುದ್ದಿ

ನಾಳೆ ಸಚಿವ ಸಂಪುಟ ವಿಸ್ತರಣೆ ಖಚಿತ. ಆದರೆ, ಎಷ್ಟು ಜನ ಸೇರ್ಪಡೆಯಾಗುತ್ತಾರೆ.ಯಾರು ಸೇರ್ಪಡೆಯಾಗುತ್ತಾರೆ  ಎಂಬ ಸ್ಪಷ್ಟ ಮಾಹಿತಿಯಿಲ್ಲ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ.

CM BS Yeddyurappa
ಸಿಎಂ ಬಿ.ಎಸ್​.ಯಡಿಯೂರಪ್ಪ

By

Published : Feb 5, 2020, 12:36 PM IST

ಕಲಬುರಗಿ:ನಾಳೆ ಸಚಿವ ಸಂಪುಟ ವಿಸ್ತರಣೆ ಖಚಿತ. ಆದರೆ, ಎಷ್ಟು ಜನ ಸೇರ್ಪಡೆಯಾಗುತ್ತಾರೆ, ಯಾರು ಸೇರ್ಪಡೆಯಾಗುತ್ತಾರೆ ಎಂಬ ಸ್ಪಷ್ಟ ಮಾಹಿತಿಯಿಲ್ಲ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ.

ನಾಳೆ ಸಚಿವಸಂಪುಟ ವಿಸ್ತರಣೆ ಖಚಿತ...ಯಾರನ್ನ ಸೇರಿಸಬೇಕು ಎಂಬುದನ್ನ ಹೈಕಮಾಂಡ್ ನಿರ್ಧರಿಸುತ್ತೆ!

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ವೇಳೆ ಏರ್ಪೋರ್ಟ್​​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾಳೆ ಸಂಪುಟ ವಿಸ್ತರಣೆ ಖಚಿತ. ಆದರೆ, ಎಷ್ಟು ಜನ ಸೇರ್ತಾರೆ. ಯಾರನ್ನ ಸೇರಿಸಬೇಕು ಎಂಬುದರ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಇಂದು ಸಂಜೆ ಹೈಕಮಾಂಡ್​ನಿಂದ ಮಾಹಿತಿ ಬಂದ ನಂತರ ಸ್ಪಷ್ಟತೆ ಸಿಗಲಿದೆ ಎಂದರು.

ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡನೆ ಮಾಡುತ್ತೇನೆ. ರೈತರಿಗೆ ಮಹಿಳೆಯರಿಗೆ ಅನುಕೂಲಕರವಾದ ಬಜೆಟ್ ಮಂಡಿಸಲಾಗುವುದು. ಯಾರಿಗೂ ಭೇದ-ಭಾವ ಮಾಡದೇ, ಬಜೆಟ್​​​ನಲ್ಲಿ ಹಂಚಿಕೆ ಮಾಡುವುದಾಗಿ ತಿಳಿಸಿದರು. ಉಮೇಶ್ ಕತ್ತಿ ಮತ್ತಿತರರ ಸೇರ್ಪಡೆ ವಿಷಯವಾಗಿ ಕೇಳಿದ ಪ್ರಶ್ನೆಗೆ ಸಿಎಂ ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟುಹೋದರು.

ABOUT THE AUTHOR

...view details