ಕರ್ನಾಟಕ

karnataka

ETV Bharat / state

ಕಲ್ಯಾಣ​ ಕರ್ನಾಟಕ ವಿಮೋಚನೆ ದಿನದಲ್ಲಿ ಸಿಎಂ ಭಾಗಿಯಾಗಲಿದ್ದಾರೆ: ಶಶೀಲ್ ನಮೋಶಿ - ವಿಮೋಚನಾ ದಿನಾಚರಣೆಗೆ ಶಶೀಲ್ ನಮೋಶಿ ಸಿಎಂ ಭಾಗಿಯಾಗಲಿದ್ದಾರೆ ಎಂದ

ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಮಾರ್ಪಡಿಸಿದ ನಂತರ ನಡೆಯುತ್ತಿರುವ ಮೊದಲ ವಿಮೋಚನಾ ದಿನಾಚರಣೆಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ಭಾಗಿಯಾಗಲಿದ್ದು, ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಶಶೀಲ್ ನಮೋಶಿ ಹೇಳಿದ್ದಾರೆ.

ವಿಮೋಚನಾ ದಿನಾಚರಣೆಗೆ ಶಶೀಲ್ ನಮೋಶಿ ಸಿಎಂ ಭಾಗಿಯಾಗಲಿದ್ದಾರೆ ಎಂದ

By

Published : Sep 11, 2019, 11:29 PM IST

ಕಲಬುರಗಿ:ಈ ಬಾರಿಯ ವಿಮೋಚನಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗಲಿದ್ದಾರೆ ಎಂದು ಕಲ್ಯಾಣ ಕರ್ನಾಟಕ ವಿಮೋಚನೆ ಮತ್ತು ಅಭಿವೃದ್ಧಿ ಸಮಿತಿ ತಿಳಿಸಿದೆ.

ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ವಿಚಾರ

ಸುದ್ದಿಗೋಷ್ಟಿ ನಡೆಸಿ‌ ಮಾತನಾಡಿದ ಸಮಿತಿ ಅಧ್ಯಕ್ಷ ಶಶಿಲ್ ನಮೋಶಿ, ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಮಾರ್ಪಡಿಸಿದ ನಂತರ ನಡೆಯುತ್ತಿರುವ ಮೊದಲ ವಿಮೋಚನಾ ದಿನ ಇದಾಗಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17 ರಂದು ಯಡಿಯೂರಪ್ಪ ಅವರು ಭಾಗಿಯಾಗಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅಲ್ಲದೆ ಕೆ.ಎ.ಟಿ. ಕಛೇರಿಗೂ ಚಾಲನೆ ನೀಡಲಿದ್ದಾರೆ ಎಂದರು.

ವಿಮೋಚನಾ ಹೋರಾಟದ ಇತಿಹಾಸ ರಚನೆಗೆ ಸಂಬಂಧಿಸಿಯೂ ಮುಖ್ಯಮಂತ್ರಿಗಳು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ನಮೋಶಿ ತಿಳಿಸಿದ್ದಾರೆ.

ABOUT THE AUTHOR

...view details