ಕಲಬುರಗಿ :ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯವರೇ ಮೇಯರ್ ಆಗೋದು ಖಚಿತ. ಪ್ರಥಮ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಯಾರು ನಂಬರ್ ಮಾಡಿಕೊಳ್ಳುತ್ತಾರೋ ಅವರು ಅಧಿಕಾರಕ್ಕೆ ಬರುತ್ತಾರೆ. ನಮ್ಮ ಪಕ್ಷ ಈ ಪ್ರಯತ್ನದಲ್ಲಿದೆ.
ನಾವು ಜೆಡಿಎಸ್ ನಾಯಕರ ಜೊತೆ ಮಾತನಾಡಿದ್ದೇವೆ. ನಮ್ಮ ನಾಯಕರು ಇತರ ಜನಪ್ರತಿನಿಧಿಗಳ ಜೊತೆಗೂ ಮಾತನಾಡಿದ್ದಾರೆ. ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಬಿಜೆಪಿಯವರು ಮೇಯರ್ ಆಗ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.