ಕಲಬುರಗಿ:ಕರ್ನಾಟಕ ಪ್ರವೇಶಿಸಲು ಚೆಕ್ಪೋಸ್ಟ್ನಲ್ಲಿ ಮಹಾರಾಷ್ಟ್ರ ಪ್ರಯಾಣಿಕರು ಮತ್ತೆ ಕಿರಿಕ್ ಮಾಡಿದ್ದಾರೆ. ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿರುವ ಜಿಲ್ಲೆಯ ಮೂರು ಕಡೆಗಳಲ್ಲಿ ಚೆಕ್ಪೋಸ್ಟ್ ತೆರೆಯಲಾಗಿದ್ದು, RTPCR ಟೆಸ್ಟ್ ನೆಗೆಟಿವ್ ವರದಿ ಇದ್ದರೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಲಾಗುತ್ತಿದೆ. ಆದ್ರೆ RTPCR ವರದಿ ಇಲ್ಲದಿದ್ದರೂ ಜಿಲ್ಲೆಗೆ ಪ್ರವೇಶ ನೀಡುವಂತೆ ಮಹಾರಾಷ್ಟ್ರ ಪ್ರಯಾಣಿಕರು ಕಿರಿಕ್ ಮಾಡಿದ್ದಾರೆ.
ಜಿಲ್ಲೆಯ ಅಫಜಲಪೂರ ತಾಲೂಕು ಬಳ್ಳೂರಗಿ ಚೆಕ್ಪೋಸ್ಟ್ನಲ್ಲಿ ಪ್ರಯಾಣಿಕರು ರಂಪಾಟ ಮಾಡಿದ್ದಾರೆ. ಚೆಕ್ಪೋಸ್ಟ್ನಲ್ಲಿ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಜೊತೆಗೆ ಜಗಳವಾಡಿದ ಮಹಾರಾಷ್ಟ್ರ ಪ್ರಯಾಣಿಕರು, ಡಬಲ್ ಡೋಸ್ ಲಸಿಕೆ ಪಡೆದಿದ್ದೇವೆ. ನಮಗೆ ಪ್ರವೇಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.