ಸೇಡಂ:ಶಿಕ್ಷಣ ನೀತಿ ವಾಪಸಾತಿ, ಕೋವಿಡ್ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರಿ ವಿಫಲವಾಗಿದೆ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಗರದಲ್ಲಿ ಮುಷ್ಕರ ನಡೆಸಿದವು.
ಶಿಕ್ಷಣ ನೀತಿ ವಾಪಸಾತಿ, ಕೋವಿಡ್ ನಿಯಂತ್ರಣ ವೈಫಲ್ಯ ಆರೋಪ: ಕೇಂದ್ರದ ವಿರುದ್ಧ ಸಿಐಟಿಯು ಪ್ರತಿಭಟನೆ - citu
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಹಾಗು ಕೇಂದ್ರ ಸರ್ಕಾರದ ವಿವಿಧ ನಡೆಗಳ ವಿರುದ್ಧ ಸೇಡಂನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಎದುರು ಜಮಾಯಿಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು. ನಂತರ ಸಹಾಯಕ ಆಯುಕ್ತರ ಕಚೇರಿ ವಿಶೇಷ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ಸುಗ್ರೀವಾಜ್ಞೆ, ಬಿಡಿಎ ಕಾಯ್ದೆ, ಪರಿಸರ ಪರಿಣಾಮ ಅಂದಾಜು ಹಾಗೂ ಶಿಕ್ಷಣ ನೀತಿ ಕಾಯ್ದೆಯನ್ನು ಸರ್ಕಾರ ಹಿಂಪಡೆಯಬೇಕು. ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಕುಟುಂಬಗಳಿಗೆ ಮುಂದಿನ ಆರು ತಿಂಗಳು 2,500 ರೂ. ನಗದು, 10 ಕೆಜಿ ಅಕ್ಕಿ, ನೀಡಬೇಕು. ಗ್ರಾಮೀಣ ಭಾಗದ ಉದ್ಯೋಗ ಖಾತ್ರಿ ನಗರಗಳಿಗೂ ವಿಸ್ತರಿಸಬೇಕು. ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದೌರ್ಜನ್ಯ ತಡೆಯಬೇಕು. ಕೊರೊನಾ ಹೆಸರಲ್ಲಿ ಸಾಮಗ್ರಿ ಖರೀದಿ ನಡೆಸಿದರ ಬಗ್ಗೆ ಸ್ವತಂತ್ರ ನ್ಯಾಯಾಂಗ ತನಿಖೆಯಾಗಬೇಕು. ರೈತರ ಸಾಲ ಮನ್ನಾ ಮಾಡಬೇಕು. ಸುಸ್ತಿ ಸಾಲದ ಜೊತೆಗೆ ಹೊಸ ಸಾಲ ನೀಡಬೇಕು. ಸಿಮೆಂಟ್ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ರಾಷ್ಟ್ರೀಯ ಸಿಮೆಂಟ್ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.