ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಆರೋಪದ ಹಿನ್ನೆಲೆ ಬಂಧಿತರಾದ ದಿವ್ಯಾ ಹಾಗರಗಿ ಸೇರಿ ಆರು ಆರೋಪಿಗಳನ್ನು 11 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ 3ನೇ ಜೆಎಂಎಫ್ಸಿ ನ್ಯಾಯಾಲಯ ಆದೇಶಿಸಿದೆ. ದಿವ್ಯಾ ಹಾಗರಗಿ, ಸುರೇಶ್ ಕಾಟೆಗಾಂವ್, ಅರ್ಚನಾ, ಸುನಿತಾ, ಕಾಳಿದಾಸ್, ಸದ್ದಾಂ ಹಾಗೂ ಜ್ಯೋತಿ ಪಾಟೀಲ್ ಎಂಬುವರನ್ನು 11 ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿದೆ.
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ 18 ದಿನಗಳ ಕಾಲ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗೂ ಇತರರರನ್ನು ಸಿಐಡಿ ಪೊಲೀಸರು ನಿನ್ನೆ ತಡರಾತ್ರಿ ಪುಣೆಯಲ್ಲಿ ಬಂಧಿಸಿ ಕಲಬುರಗಿಗೆ ಕರೆತಂದಿದ್ದಾರೆ. ಇಂದು ವೈದ್ಯಕೀಯ ತಪಾಸಣೆ ಬಳಿಕ ಅಧಿಕಾರಿಗಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.