ಕರ್ನಾಟಕ

karnataka

ETV Bharat / state

ಇಎಸ್​ಐಸಿ‌ ಆಸ್ಪತ್ರೆಯಲ್ಲಿ ಮತ್ತೊಂದು ಪರೀಕ್ಷಾ ಕೇಂದ್ರ ಸ್ಥಾಪಿಸಿ.. ಪ್ರಿಯಾಂಕ್ ಖರ್ಗೆ ಆಗ್ರಹ

ಸರ್ಕಾರದ ನಿರ್ಲಕ್ಷ್ಯತನಕ್ಕೆ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿರುವ ಅವರು, ಜಿಮ್ಸ್​ನ ಸೋಂಕು ಪತ್ತೆ ಕೇಂದ್ರದ ಯಂತ್ರಗಳ ಸರ್ವೀಸ್ ಮಾಡುವುದು ಅವಶ್ಯಕ. ಆದರೆ, ಈಗಾಗಲೇ ಸಾವಿರಾರು ಸಂಖ್ಯೆಯ‌ ಮಾದರಿ ಪರೀಕ್ಷೆಯಾಗದೆ ಉಳಿದಿವೆ.‌.

Chittapur MLA Priyank Kharghe Tweet
ಕಲಬುರಗಿ ಇಎಸ್​ಐಸಿ‌ ಆಸ್ಪತ್ರೆಯಲ್ಲಿ ಮತ್ತೊಂದು ಕೊರೊನಾ ಪರೀಕ್ಷಾ ಕೇಂದ್ರ ಸ್ಥಾಪಿಸಿ: ಪ್ರಿಯಾಂಕ್ ಖರ್ಗೆ ಆಗ್ರಹ

By

Published : Jul 12, 2020, 8:11 PM IST

ಕಲಬುರಗಿ:ನಗರದ ಇಎಸ್​ಐಸಿ‌ ಆಸ್ಪತ್ರೆಯಲ್ಲಿ ಮತ್ತೊಂದು ಕೋವಿಡ್-19 ಸೋಂಕು ಪರೀಕ್ಷಾ ಕೇಂದ್ರ ಸ್ಥಾಪಿಸುವಂತೆ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಇಎಸ್​ಐಸಿ‌ ಆಸ್ಪತ್ರೆಯಲ್ಲಿ ಮತ್ತೊಂದು ಕೊರೊನಾ ಪರೀಕ್ಷಾ ಕೇಂದ್ರ ಸ್ಥಾಪಿಸಿ

ಈ ಕುರಿತು ಟ್ವೀಟ್​ ಮಾಡಿರುವ ಅವರು, ಕಲಬುರಗಿಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ನಗರದ‌ ಇಎಸ್​ಐಸಿ‌ ಆಸ್ಪತ್ರೆಯಲ್ಲಿ ಮತ್ತೊಂದು ಕೊರೊನಾ ಸೋಂಕು ಪರೀಕ್ಷಾ ಕೇಂದ್ರ ಸ್ಥಾಪಿಸಿ ತ್ವರಿತಗತಿಯಲ್ಲಿ ಸೋಂಕು ಪತ್ತೆ ಮಾಡಿ, ಸೋಂಕಿತರಿಗೆ ಚಿಕಿತ್ಸೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ‌‌.

ಇಎಸ್​ಐಸಿ‌ ಆಸ್ಪತ್ರೆಯಲ್ಲಿ ಮತ್ತೊಂದು ಕೊರೊನಾ ಪರೀಕ್ಷಾ ಕೇಂದ್ರ ಸ್ಥಾಪಿಸಿ

ಇನ್ನು, ಜಿಮ್ಸ್​ನಲ್ಲಿ ನಡೆಸಲಾಗುತ್ತಿದ್ದ ಸೋಂಕು ಪರೀಕ್ಷಾ ಕೇಂದ್ರದ ಯಂತ್ರಗಳು ಮಾರ್ಚ್ 23ರಿಂದ ದಿನದ 24ಗಂಟೆ ಕಾರ್ಯನಿರ್ವಹಿಸುತ್ತಿವೆ. ಈಗ ಯಂತ್ರಗಳನ್ನ ಸರ್ವೀಸ್ ಮಾಡುವ ಅವಶ್ಯಕತೆಯಿದೆ. ಜುಲೈ 12, 13ರಂದು ಯಾವುದೇ ಮಾದರಿ ಸ್ವೀಕರಿಸುವುದಿಲ್ಲ ಹಾಗೂ ಪರೀಕ್ಷೆ ಮಾಡುವುದಿಲ್ಲ. ಈ ಕುರಿತು ಜಿಮ್ಸ್​ನ ಸೋಂಕು ಪತ್ತೆ ಹಾಗೂ ಸಂಶೋಧನಾ ಕೇಂದ್ರದ ಪ್ರಧಾನ ಸಂಶೋಧಕರು, ಜಿಮ್ಸ್​ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವುದಾಗಿ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸರ್ಕಾರದ ನಿರ್ಲಕ್ಷ್ಯತನಕ್ಕೆ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿರುವ ಅವರು, ಜಿಮ್ಸ್​ನ ಸೋಂಕು ಪತ್ತೆ ಕೇಂದ್ರದ ಯಂತ್ರಗಳ ಸರ್ವೀಸ್ ಮಾಡುವುದು ಅವಶ್ಯಕ. ಆದರೆ, ಈಗಾಗಲೇ ಸಾವಿರಾರು ಸಂಖ್ಯೆಯ‌ ಮಾದರಿ ಪರೀಕ್ಷೆಯಾಗದೆ ಉಳಿದಿವೆ.‌ ಈ ಹಂತದಲ್ಲಿ ಎರಡು‌ ದಿನಗಳ ಕಾಲ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಮಾದರಿ‌ ಸ್ವೀಕರಿಸದಿರುವುದು ಹಾಗೂ ಪರೀಕ್ಷೆ ನಡೆಸದಿರುವುದರಿಂದ ಸೋಂಕಿನ ಮಾದರಿ ಗಣನೀಯ‌ ಪ್ರಮಾಣದಲ್ಲಿ ಹೆಚ್ಚಳವಾಗಲಿವೆ.

ಸರ್ಕಾರ ಈ ಸಂದರ್ಭದಲ್ಲಿ ಮತ್ತೊಂದು ಪರೀಕ್ಷಾ ಮಾದರಿ‌ ಕೇಂದ್ರವನ್ನ ಇಎಸ್​ಐಸಿ‌ನಲ್ಲಿ ಸ್ಥಾಪಿಸಿದ್ರೆ, ತ್ವರಿತಗತಿಯಲ್ಲಿ ಸೋಂಕು ಪತ್ತೆ ಕಾರ್ಯ ಮುಂದುವರೆಸಬಹುದಿತ್ತು. ಆದರೆ,‌ ಸರ್ಕಾರ ಈ‌ ವಿಷಯದಲ್ಲಿ ವಿಫಲವಾಗಿದೆ‌ ಎಂದು ಕುಟುಕಿದ್ದಾರೆ.

ABOUT THE AUTHOR

...view details