ಕರ್ನಾಟಕ

karnataka

ETV Bharat / state

ಕುರಿ ರಕ್ಷಿಸಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಬಾಲಕ ಸಾವು - ಕಲಬುರಗಿಯಲ್ಲಿ ಕೃಷಿ ಹೊಂಡದಲ್ಲಿ ಬಿದ್ದು ಬಾಲಕ ಸಾವು

ಕುರಿ ಕಾಯಲು ಹೋಗಿದ್ದಾಗ ಕೃಷಿ ಹೊಂಡದಲ್ಲಿ ಕುರಿ ಹೋಗಿತ್ತು, ಅದನ್ನು ರಕ್ಷಿಸಿಕೊಂಡು ಬರಲು ಹೋದಾಗ ಹೊಂಡದಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿದ್ದಾನೆ.

Child dies after falling into farm pits in  Kalaburagi
ಕೃಷಿ ಹೊಂಡದಲ್ಲಿ ಬಿದ್ದು ಬಾಲಕ ಸಾವು

By

Published : Oct 19, 2020, 10:36 AM IST

ಕಲಬುರಗಿ:ಕೃಷಿ ಹೊಂಡದಲ್ಲಿ ಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ಶಹಾಬಾದ ತಾಲೂಕಿನ ತೊನಸನಳ್ಳಿ ಗ್ರಾಮದಲ್ಲಿ ನಡೆದಿದೆ.

ನವೀನ್ (12) ಮೃತ ಬಾಲಕ. ತೊನಸನಳ್ಳಿ ಗ್ರಾಮದ ನಿವಾಸಿಯಾದ ನವೀನ್, ಕುರಿ ಮೇಯಿಸಲು ಹೋಗಿದ್ದಾಗ ಕೃಷಿ ಹೊಂಡದಲ್ಲಿ ಕುರಿ ಹೋಗಿತ್ತು, ಅದನ್ನು ರಕ್ಷಿಸಿಕೊಂಡು ಬರಲು ಹೋದಾಗ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಭಾರೀ ಮಳೆ ಹಿನ್ನೆಲೆಯಲ್ಲಿ ಕೃಷಿ ಹೊಂಡ ತುಂಬಿ ಜಮೀನಲ್ಲಿ ನೀರು ನಿಂತಿದೆ. ಶಹಾಬಾದ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.

ABOUT THE AUTHOR

...view details