ಕಲಬುರಗಿ : ನಗರದಲ್ಲಿ ನಡೆದ ಜನಸೇವಕ ಸಮಾವೇಶ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ವೇದಿಕೆಯಿಂದ ಹೊರ ನಡೆದಿದ್ದು, ಅವರ ಸಚಿವ ಸ್ಥಾನಕ್ಕೆ ಆಪತ್ತು ಬಂದಿದಿಯಾ ಎಂಬ ಅನುಮಾನ ವ್ಯಕ್ತವಾಗಿದೆ.
ಸಮಾವೇಶ ಆರಂಭಕ್ಕೂ ಮುನ್ನವೇ ವೇದಿಕೆಯಿಂದ ಇಳಿದು ಹೋದ ಚೌಹಾಣ್.. ಸಚಿವ ಸ್ಥಾನಕ್ಕೆ ಕುತ್ತು!? - Prabhu Chauhan
ಸಚಿವ ಸಂಪುಟ ಪುನರ್ ರಚನೆಯಾದ್ರೇ ಚೌಹಾಣ್ಗೆ ಶಾಕ್ ಕಾದಿದೆಯಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಹಲವು ದಿನಗಳಿಂದ ನಡೆಯುತ್ತಿದೆ..
ಸಮಾವೇಶ ಆರಂಭಕ್ಕೂ ಮುನ್ನವೆ ಚವ್ಹಾಣ್ ವೇದಿಕೆಯಿಂದ ಔಟ್
ವೇದಿಕೆ ಮೇಲೆ ಬಂದು ಕೇವಲ ಕೆಲ ನಿಮಿಷದಲ್ಲಿಯೇ ಸಚಿವ ಚೌಹಾಣ್ಗೆ ದೂರವಾಣಿ ಕರೆ ಬಂದ ಹಿನ್ನೆಲೆ ಅವಸರ ಅವಸರವಾಗಿಯೇ ಸಚಿವ ಜಗದೀಶ್ ಶೆಟ್ಟರ್ ಗಮನಕ್ಕೆ ತಂದು ವೇದಿಕೆಯಿಂದ ಪ್ರಭು ಚೌಹಾಣ್ ಹೊರ ನಡೆದರು.
ಸಚಿವ ಸಂಪುಟ ಪುನರ್ ರಚನೆಯಾದ್ರೇ ಚೌಹಾಣ್ಗೆ ಶಾಕ್ ಕಾದಿದೆಯಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಹಲವು ದಿನಗಳಿಂದ ನಡೆಯುತ್ತಿದೆ. ಈಗ ಸಚಿವ ಪ್ರಭು ಚೌಹಾಣ್ ನಡೆ ಅನುಮಾನಗಳಿಗೆ ಇಂಬು ನೀಡಿದೆ.