ಕಲಬುರಗಿ: ಹೆಮ್ಮಾರಿ ಕೊರೊನಾ ಎಲ್ಲೆಡೆ ನಿದ್ದೆ ಕೆಡಿಸುತ್ತಿದೆ, ಕೊರೊನಾ ನಿಯಂತ್ರಣಕ್ಕೆ ತರಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡ್ತಿವೆ ಎಂದು ಕಲಬುರಗಿ ಜಿಲ್ಲೆಯ ನೂತನ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.20 ರಷ್ಟು ಆಕ್ಸಿಜನ್ ಕೊರತೆ ಇದೆ. 600 ಟನ್ ಆಕ್ಸಿಜನ್ ಕೈಗಾರಿಕೆಗಳಿಂದ ಸಿಗುತ್ತಿದೆ. ಸ್ಥಳೀಯವಾಗಿಯೂ ಉತ್ಪಾನೆಯಾಗ್ತಿರುವ ಆಕ್ಸಿಜನ್ ಬಳಕೆ ಮಾಡಲಾಗುತ್ತಿದೆ. ಆಕ್ಸಿಜನ್, ರೆಮ್ಡೆಸಿವರ್ ಇಂಜಕ್ಷನ್, ಬೆಡ್, ವೈದ್ಯರ ಸೌಲಭ್ಯ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕಲಬುರಗಿಯಲ್ಲಿಯೂ ಆಕ್ಸಿಜನ್ ಕೊರತೆ ಜೊತೆಗೆ ಸಿಲಿಂಡರ್, ಆಕ್ಸಿಜನ್ ಸಪ್ಲೈ ಮಾಡೋ ಟ್ಯಾಂಕರ್ ಕೊರತೆ ಎದ್ದು ಕಾಣುತ್ತಿದೆ. ಈ ಕುರಿತು ಕಾಂಗ್ರೆಸ್, ಜೆಡಿಎಸ್ ಮುಖಂಡರ ಜೊತೆಯೂ ಮಾತನಾಡಿ ಅವರಿಂದ ಸಲಹೆ ಪಡೆದಿರುವೆ ಎಲ್ಲಾದರೂ ಆಕ್ಸಿಜನ್ ಸೀಗುವ ಹಾಗಿದ್ರೆ ತಿಳಿಸುವಂತೆ ಮನವಿ ಮಾಡಿದ್ದೇನೆ. ಇನ್ನು ಸಿಮೆಂಟ್ ಫ್ಯಾಕ್ಟರಿಗಳಿಂದ ಖಾಲಿ ಸಿಲಿಂಡರ್ ತರಿಸಿಕೊಳ್ಳೋಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಮೊಬೈಲ್ ಆಪ್ ಗಾಗಿ ಸಿದ್ದತೆ
ಬೆಡ್, ಆಕ್ಸಿಜನ್, ವೆಂಟಿಲೇಟರ್ ಲಭ್ಯತೆ ಬಗ್ಗೆ ಜನರಿಗೆ ಮಾಹಿತಿ ಸಿಗಲು ಮೊಬೈಲ್ ಆಪ್ ಸಿದ್ದ ಮಾಡ್ತಿದ್ದೇವೆ. ಆ ಆಪ್ ನಲ್ಲಿ ಒಂದು ಗಂಟೆಗೊಮ್ಮೆ ಆಕ್ಸಿಜನ್, ಬೆಡ್, ವೆಂಟಿಲೇಟರ್ ಬಗ್ಗೆ ಅಪ್ಡೆಟ್ಸ್ ಮಾಡಲಾಗುತ್ತದೆ. ಇದರಿಂದ ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್ ಲಭ್ಯತೆ ಬಗ್ಗೆ ಜನರಿಗೆ ಮಾಹಿತಿ ಸಿಗಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಮಾಹಿತಿ ನೀಡಿದ್ದಾರೆ.